×
Ad

ವಿದ್ಯುತ್ ಕಡಿತದಿಂದ ಸರಕಾರಿ ಆಸ್ಪತ್ರೆಯಲ್ಲಿ ಐವರು ರೋಗಿಗಳ ಸಾವು

Update: 2019-05-08 21:03 IST

 ಮದುರೈ,ಮೇ 8: ಇಲ್ಲಿಯ ಸರಕಾರಿ ರಾಜಾಜಿ ಆಸ್ಪತ್ರೆಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯದಿಂದಾಗಿ ಜೀವರಕ್ಷಕ ಸಾಧನಗಳು ಅಳವಡಿಸಲ್ಪಟ್ಟಿದ್ದ ಐವರು ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದರು.

ಆದರೆ,ತೀವ್ರ ನಿಗಾ ಘಟಕದಲ್ಲಿದ್ದ ರೋಗಿಗಳು ಸಹಜ ಕಾರಣಗಳಿಂದ ಮೃತಪಟ್ಟಿದ್ದಾರೆ. ಆ ಸಮಯದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವುಂಟಾಗಿದ್ದು ಕೇವಲ ಕಾಕತಾಳೀಯವಾಗಿತ್ತು ಎಂದು ಆಸ್ಪತ್ರೆಯ ಡೀನ್ ವನಿತಾ ಸಮಜಾಯಿಷಿ ನೀಡಿದ್ದಾರೆ.

ಇನ್ನೊಂದಡೆ ಮೃತರ ಬಂಧುಗಳು,ಜೀವರಕ್ಷಕ ಸಾಧನಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿರಲಿಲ್ಲ ಎಂದು ಆರೋಪಿಸಿದ್ದಾರೆ. ಅವರು ಆಸ್ಪತ್ರೆಯ ವಿರುದ್ಧ ಧರಣಿಯನ್ನೂ ನಡೆಸಿದರು.

ಈ ಆರೋಪಗಳನ್ನು ನಿರಾಕರಿಸಿರುವ ನಿರ್ದೇಶಕ (ವೈದ್ಯಕೀಯ ಶಿಕ್ಷಣ) ಡಾ.ಎ.ಎಡ್ವಿನ್ ಜೋ ಅವರು,ವೆಂಟಿಲೇಟರ್‌ಗಳು ಅಂತರನಿರ್ಮಿತ ಬ್ಯಾಟರಿಗಳನ್ನು ಹೊಂದಿದ್ದು,ಸರಿಯಾಗಿಯೇ ಕಾರ್ಯ ನಿರ್ವಹಿಸುತ್ತಿದ್ದವು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News