×
Ad

ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಿ: ಎಸಿ ಮಧುಕೇಶ್ವರ್

Update: 2019-05-08 21:05 IST

ಉಡುಪಿ, ಮೇ 8: ನೀರಿನ ಸಮಸ್ಯೆ ಇರುವ ಗ್ರಾಮಗಳಲ್ಲಿ ನೀರಿನ ಮೂಲಗಳ ಸರ್ವೆ ಮಾಡಿ ನೀರು ಪೂರೈಕೆಗೆ ಅವಕಾಶ ಇರುವ ಬಗ್ಗೆ ಮಾಹಿತಿ ಪಡೆದುಕೊಂಡು ಅಗತ್ಯ ಇರುವ ಕಡೆಗೆ ಮಾತ್ರ ಕುಡಿಯುವ ನೀರನ್ನು ಪೂರೈಕೆ ಮಾಡಬೇಕು. ಮಳೆಗಾದಲ್ಲಿ ಕರಾವಳಿ ತೀರದಲ್ಲಿ ಕಡಲ್ಕೊರೆತ ಬಹುದೊಡ್ಡ ಸಮಸ್ಯೆಯಾಗಿದ್ದು, ಕಡಲ್ಕೊರೆತ ಆಗುವ ಮೊದಲು, ಕಡಲ್ಕೊರೆತ ತಡೆಗೆ ಈಗಾಗಲೇ ಕೈಗೊಂಡಿರುವ ಕಾರ್ಯವನ್ನು ನಿಗದಿತ ಸಮಯದಲ್ಲಿ ಪೂರ್ಣ ಗೊಳಿಸುವಂತೆ ಕುಂದಾಪುರದ ಸಹಾಯಕ ಆಯುಕ್ತ ಮಧುಕೇಶ್ವರ್ ತಿಳಿಸಿದ್ದಾರೆ.

ಬುಧವಾರ ಉಡುಪಿ ತಾಲೂಕು ಪಂಚಾಯತ್ ಸಭಾಭವನದಲ್ಲಿ ನಡೆದ ತಾಲೂಕು ಮಟ್ಟದ ವಿಪತ್ತು ನಿರ್ವಹಣೆ ಮತ್ತು ಕುಡಿಯುವ ನೀರಿನ ಸಭೆಯಲ್ಲಿ ಮಾತನಾಡುತಿದ್ದರು. ಮಳೆಗಾಲದಲ್ಲಿ ಗಾಳಿ-ಮಳೆಗೆ ಯಾವುದೇ ಸಮಸ್ಯೆ ಯಾದಲ್ಲಿ ಶೀಘ್ರ ನಿರ್ವಹಣೆಗೆ ಮೆಸ್ಕಾಂನ ದೂ.ಸಂ.1912 ಸಂಖ್ಯೆಗೆ ಕರೆ ಮಾಡುವಂತೆ ಅವರು ತಿಳಿಸಿದರು.

ವಿಪತ್ತು ನಿರ್ವಹಣೆಯ ಸಮಯದಲ್ಲಿ ಸದಾ ಸನ್ನದ್ದರಾಗಿದ್ದು, ಅಗತ್ಯವಿರುವ ಪರಿಕರಗಳ ಬಗ್ಗೆ ವರದಿ ನೀಡುವಂತೆ ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ಗ್ರಾಪಂಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರಿನ ಸರಬರಾಜು ನಡೆದಿದ್ದು, ಈ ಪೈಕಿ 11 ಪಂಚಾಯತ್‌ಗಳು ಮಾತ್ರ 48 ಲಕ್ಷ ರೂ. ಬಿಲ್ ನೀಡಿವೆ. ಸಂಬಂದಪಟ್ಟ ಎಲ್ಲಾ ಗ್ರಾಪಂಗಳು ಕುಡಿಯುವ ನೀರಿನ ಪೂರೈಕೆಗೆ ಸಂಬಂಧಿಸಿ ಪ್ರತೀ ವಾರ ಬಿಲ್ ನೀಡುವಂತೆ ತಿಳಿಸಿದರು.

ಮಳೆಗಾಲದಲ್ಲಿ ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗುವ ಸಾಧ್ಯತೆ ಇದ್ದು ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಒಳಚರಂಡಿಗಳ ಸಮರ್ಪಕ ನಿರ್ವಹಣೆಯನ್ನು ನೋಡಿಕೊಳ್ಳಬೇಕು. ಪೊಲೀಸ್ ಮತ್ತು ಆರ್‌ಟಿಓ ಜೊತೆಗೂಡಿ ರಸ್ತೆಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸುವ ಕಾರ್ಯ ಮಾಡಬೇಕು. ರಸ್ತೆಗಳಲ್ಲಿ ಮಾರ್ಜಿನ್ ಹಾಗೂ ಸರ್ವಿಸ್ ರೋಡ್‌ಗಳಲ್ಲಿ ಪ್ಲಾಂಟೇಶನ್‌ಗಳನ್ನು ಆರಂಭಿಕ ಹಂತದಲ್ಲಿ ಸರಿಯಾಗಿ ನಿರ್ವಹಿಸಬೇಕು. ಹೆದ್ದಾರಿ ಸಮಸ್ಯೆಗಳ ಬಗ್ಗೆ ಶೀಘ್ರ ನಿರ್ವಹಣೆಗೆ ವಾಟ್ಸ್‌ಪ್ ಗ್ರೂಪ್ ಮಾಡಿ ಪೊಲೀಸ್, ಪಿಡಿಓ ಇತರ ಸಂಬಂಧ ಪಟ್ಟ ಇಲಾಖೆಗಳ ಜೊತೆ ಚರ್ಚಿಸಬೇಕು ಎಂದರು.

ಹಳ್ಳ, ಹೊಂಡಗಳಿರುವ ಕಡೆ ಮುಂಜಾಗೃತಾ ಕ್ರಮವಾಗಿ ಫಲಕಗಳನ್ನು ಹಾಕುವುದು ಹಾಗೂ ಹೊಂಡಗಳ ಸುತ್ತ ತಡೆಬೇಲಿಗಳನ್ನು ನಿರ್ಮಿಸುವ ಕೆಲಸ ವಾಗಬೇಕು. ಖಾಸಗಿ ಜಾಗದಲ್ಲಿ ಯಾವುದೇ ಅಪಾಯಕಾರಿ ಹೊಂಡಗಳಿದ್ದರೆ ಆ ಜಾಗದ ಮಾಲಿಕರಿಗೆ ಅಗತ್ಯಕ್ರಮ ಕೈಗೊಳ್ಳಲು ಸೂಚಿಸಿ, ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಇಂಜಿನಿಯರ್‌ಗಳ ಜೊತೆ ಸ್ಥ ಪರೀಕ್ಷೆ ನಡೆಸಬೇಕು ಎಂದರು.

ಹಳ್ಳ, ಹೊಂಡಗಳಿರುವ ಕಡೆ ಮುಂಜಾಗೃತಾ ಕ್ರಮವಾಗಿ ಫಲಕಗಳನ್ನು ಹಾಕುವುದು ಹಾಗೂ ಹೊಂಡಗಳ ಸುತ್ತ ತಡೆಬೇಲಿಗಳನ್ನು ನಿರ್ಮಿಸುವ ಕೆಲಸ ವಾಗಬೇಕು. ಖಾಸಗಿ ಜಾಗದಲ್ಲಿ ಯಾವುದೇ ಅಪಾಯಕಾರಿ ಹೊಂಡಗಳಿದ್ದರೆ ಆ ಜಾಗದ ಮಾಲಿಕರಿಗೆ ಅಗತ್ಯಕ್ರಮ ಕೈಗೊಳ್ಳಲು ಸೂಚಿಸಿ, ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಇಂಜಿನಿಯರ್‌ಗಳ ಜೊತೆ ಸ್ಥಳ ಪರೀಕ್ಷೆ ನಡೆಸಬೇಕು ಎಂದರು. ಪ್ರಕೃತಿ ವಿಕೋಪದಡಿಯಲ್ಲಿ ಹಾನಿಗೊಳಗಾದವರಿಗೆ ಸ್ವಯಂ ಪ್ರೇರಿತವಾಗಿ ಸಹಕರಿಸುವಂತೆ ಸಲಹೆ ನೀಡಿದ ಅವರು, ಮಾನವಜೀವ ಅಮೂಲ್ಯವಾಗಿದ್ದು ಹಾನಿಗೊಳಗಾದಾಗ ಪ್ರತಿಯೊಬ್ಬರು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು. ಆಯಾ ಇಲಾಖೆಗೆ ಸಂಬಂಧಿಸಿದಂತೆ ವಿಪತ್ತು ನಿರ್ವಹಣೆಗೆ ಸಂಬಂಧಿಸಿದ ಪರಿಕರಗಳ ಲ್ಯತೆ ಬಗ್ಗೆ 7 ದಿನದೊಳಗೆ ಮಾಹಿತಿ ನೀಡುವಂತೆ ಸೂಚನೆ ನೀಡಿದರು.

ಸಭೆಯಲ್ಲಿ ಉಡುಪಿ ಜಿಪಂನ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ್ ರಾವ್ ಮಾತನಾಡಿ, ಮಳೆ ಕಡಿಮೆ ಆಗಿರುವ ಕಾರಣ ಅಂತರ್ಜಲ ಕಡಿಮೆಯಾಗಿದೆ. ಕುಡಿಯುವ ನೀರು ಇತರೆ ಚಟುವಟಿಕೆಗಳಿಗೆ ಬಳಕೆ ಯಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು, ಈ ಬಗ್ಗೆ ಗಮನ ಹರಿಸು ವಂತೆ ಸಂಬಂಧ ಪಟ್ಟ ಇಲಾಖೆಗೆ ಸೂಚಿಸಿದರು. ಕುಡಿಯುವ ನೀರಿನ ಪೂರೈಕೆಯ ಬಿಲ್ ಜೊತೆಗೆ ನೀರು ಪೂರೈಕೆಯ ವರದಿ, ದಾಖಲೆ, ರದ ಮಾಹಿತಿ ನೀಡುವಂತೆ ತಿಳಿಸಿದರು.

ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್, ಬ್ರಹ್ಮಾವರ ತಹಶೀಲ್ದಾರ್ ಕಿರಣ್ ಗೌರಯ್ಯ,ಕಾಪು ತಹಶೀಲ್ದಾರ್ ರಶ್ಮಿ, ಉಡುಪಿ ತಾಪಂ ಇಓ ರಾಜು, ವಿವಿಧ ಇಲಾೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News