ಪಿ.ಎ. ತಾಂತ್ರಿಕ ವಿದ್ಯಾಲಯದಲ್ಲಿ ಬೀಳ್ಕೊಡುಗೆ ಸಮಾರಂಭ
ಮಂಗಳೂರು : ಪಿ.ಎ. ತಾಂತ್ರಿಕ ವಿದ್ಯಾಲಯವು ಅಂತಿಮ ವರ್ಷದ ಬಿ.ಇ., ಎಂ.ಟೆಕ್ ಹಾಗೂ ಎಂ.ಬಿ.ಎ ವಿದ್ಯಾರ್ಥಿಗಳಿಗೆ ಕಾಲೇಜಿನ ಸಭಾಂಗಣದಲ್ಲಿ ಇತ್ತೀಚೆಗೆ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಸಮಾರಂಭದಲ್ಲಿ ಗೌರವಾನ್ವಿತ ಅತಿಥಿಯಾಗಿ ಪಿ.ಎ. ವಿದ್ಯಾಸಂಸ್ಥೆಯ ಕಾರ್ಯನಿರ್ದೇಶಕ ಅಬ್ದುಲ್ಲಾ ಇಬ್ರಾಹೀಂ ಮತ್ತು ಸಮಾರಂಭದ ಅಧ್ಯಕ್ಷರಾಗಿ ಕಾಲೇಜಿನ ಪ್ರಾಂಶುಪಾಲ ಡಾ. ಅಬ್ದುಲ್ ಶರೀಫ್ ಭಾಗವಹಿಸಿದ್ದರು.
ಸಮಾರಂಭದಲ್ಲಿ ಕಾಲೇಜಿನ 2018-19ರ ಸುದ್ದಿಪತ್ರ ಬಿಡುಗಡೆಗೊಳಿಸಲಾಯಿತು. ವಿವಿಧ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ತಮ್ಮ ಕಾಲೇಜು ದಿನದ ಅನುಭವವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಅಕಾಡಮಿ ನಿರ್ದೇಶಕ ಡಾ.ಸರ್ಫರಾಜ್ ಜೆ. ಹಾಷಿಮ್, ಎಂಬಿಎ ವಿಭಾಗದ ನಿರ್ದೇಶಕಿ ಡಾ.ಲತಾ ಕೃಷ್ಣನ್ ಮತ್ತು ವಿವಿಧ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರೊ.ಮುಹಮ್ಮದ್ ಅನಿಕ್ ಪ್ರಾರ್ಥಿಸಿದರು. ಪ್ರೊ.ಪ್ರವೀಣ್ ಸುರ್ವಣಾ ಸ್ವಾಗತಿಸಿದರು. ಪ್ರೊ.ಇಸ್ಮಾಯೀಲ್ ಶಾಫಿ ವಂದಿಸಿದರು.