ಮುಂಬೈ ವಿಮಾನ ನಿಲ್ದಾಣದಲ್ಲಿ ರನ್‌ವೇಯಲ್ಲಿ ಜಾರಿದ ಐಎಎಫ್‌ನ ವಿಮಾನ

Update: 2019-05-08 17:00 GMT

ಮುಂಬೈ, ಮೇ 8: ಭಾರತೀಯ ವಾಯು ಪಡೆಗೆ ಸೇರಿದ ವಿಮಾನವೊಂದು ಬುಧವಾರ ಮುಂಬೈ ವಿಮಾನ ನಿಲ್ದಾಣದಿಂದ ನಿರ್ಗಮಿಸುವ ಸಂದರ್ಭ ರನ್‌ವೇಯಿಂದ ಜಾರಿದ ಘಟನೆ ನಡೆದಿದೆ.

ಈ ಘಟನೆಯ ಕಾರಣಕ್ಕೆ ವಿಮಾನಗಳ ಹಾರಾಟವನ್ನು ಎರಡನೇ ರನ್‌ವೇಗೆ ವರ್ಗಾಯಿಸಲಾಯಿತು ಎಂದು ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್‌ನ ಅಧಿಕಾರಿಗಳು ತಿಳಿಸಿದ್ದಾರೆ.

ವಾಯುಪಡೆಯ ವಿಮಾನ ಮುಂಬೈ ವಿಮಾನ ನಿಲ್ದಾಣದಿಂದ ಅಪರಾಹ್ನ 11.39ಕ್ಕೆ ನಿರ್ಗಮಿಸುವ ಸಂದರ್ಭ ರನ್‌ವೇಯಲ್ಲಿ ಜಾರಿರುವುದನ್ನು ಅಧಿಕಾರಿಗಳು ದೃಢಪಡಿಸಿದ್ದಾರೆ.

ತಾಂತ್ರಿಕ ಕಾರಣ ಹಾಗೂ ರನ್‌ವೇಯಿಂದ ಜಾರಿರುವ ಕಾರಣಕ್ಕೆ ಈ ವಿಮಾನದ ಹಾರಾಟವನ್ನು ಕೂಡ ರದ್ದುಗೊಳಿಸಲಾಯಿತು ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ. ವಿಮಾನ ಹಾಗೂ ಸಿಬ್ಬಂದಿ ಸುರಕ್ಷಿತರಾಗಿದ್ದಾರೆ. ಪುನಶ್ಚೇತನ ತಂಡ ಮುಂಬೈಗೆ ಆಗಮಿಸಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News