ಎದೆನೋವಿನಿಂದ ಫೋಸ್ಟ್‌ಮೆನ್ ಮೃತ್ಯು

Update: 2019-05-08 17:15 GMT

ಅಮಾಸೆಬೈಲು : ಎದೆನೋವಿನಿಂದ ಪೋಸ್ಟ್ ಮೆನ್ ಮೃತಪಟ್ಟ ಘಟನೆ ಮೇ 7ರಂದು ರಾತ್ರಿ ವೇಳೆ ಮಡಾಮಕ್ಕಿ ಗ್ರಾಮದ ಗುಪ್ತಮಕ್ಕಿ ಎಂಬಲ್ಲಿ ನಡೆದಿದೆ.

ಮೃತರನ್ನು ಚಂದ್ರ ಹಾಂಡ(52) ಎಂದು ಗುರುತಿಸಲಾಗಿದೆ. ಪೋಸ್ಟ್ ಮ್ಯಾನ್ ಕರ್ತವ್ಯ ನಿರ್ವಹಿಸಿ ಮನೆಗೆ ಹೋಗಿದ್ದ ಇವರಿಗೆ ಎದೆನೋವು ಕಾಣಿಸಿ ಕೊಂಡಿತ್ತೆನ್ನಲಾಗಿದೆ. ಮಣಿಪಾಲ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಅವರು ಮೃತಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News