ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಎನ್.ಎ.ಬಿ.ಎಚ್ ಮಾನ್ಯತೆ

Update: 2019-05-08 17:26 GMT

ಉಳ್ಳಾಲ: ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ ಅಧೀನದ ಆಸ್ಪತ್ರೆ ಹಾಗೂ ಆರೋಗ್ಯ ಸೇವಾದಾತರ ರಾಷ್ಟ್ರೀಯ ಮಾನ್ಯತಾ ಮಂಡಳಿಯು (ಎನ್‍ಎಬಿಎಚ್) ಮಂಗಳೂರು ತಾಲೂಕಿನಲ್ಲಿರುವ ದೇರಳಕಟ್ಟೆಯ ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಮಾನ್ಯತೆಯನ್ನು ನೀಡಿರುತ್ತದೆ.

ಈ ಮಾನ್ಯತೆಯು 2019 ಮಾರ್ಚ್ 31 ರಿಂದ 2022  ಮಾರ್ಚ್ 30ರ ತನಕ ಜಾರಿಯಲ್ಲಿರುತ್ತದೆ. ಈ ಮಾನ್ಯತೆಯನ್ನು ಎನ್‍ಎಬಿಎಚ್ ನಿರ್ದಿಷ್ಟಪಡಿಸಿದ ಗುಣಮಟ್ಟ ಮಾನದಂಡಗಳನ್ನು ಆಸ್ಪತ್ರೆಯು ನಿರಂತರವಾಗಿ ಕಾಯ್ದುಕೊಳ್ಳುವ ಬದ್ಧತೆ, ರೋಗಿಗಳ ಸುರಕ್ಷತೆ, ರೋಗಿಗಳ ಕಾಳಜಿಯಲ್ಲಿ ದಕ್ಷತೆ ಮತ್ತು ಉತ್ತರದಾಯಿತ್ವವನ್ನು ಯಾವತ್ತೂ ಕಾರ್ಯಗತಗೊಳಿಸುವ ಆಧಾರದ ಮೇಲೆ ನೀಡಲಾಗಿದೆ.

ಮೇ 4 ರಂದು ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನಡೆದ ಸಮಾರಂಭದಲ್ಲಿ  ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ) ದ ಕುಲಪತಿ  ವೈ. ಅಬ್ದುಲ್ಲ ಕುಂಞಿ ಅವರು ಎನ್.ಎ.ಬಿ.ಎಚ್ ನೀಡಿರುವ ಮಾನ್ಯತೆಯ ದೃಢಪತ್ರವನ್ನು ಅನಾವರಣಗೊಳಿಸಿದರು. ಯಾವತ್ತೂ ನಿರಂತರವಾಗಿ ಉತ್ಕೃಷ್ಟ ಗುಣಮಟ್ಟದ ಆರೋಗ್ಯ ಸೇವೆಯನ್ನು ರೋಗಿಗಳಿಗೆ ನೀಡಲು ಸರ್ವರು ದುಡಿಯಬೇಕೆಂದು ಅವರು ಕರೆ ನೀಡಿದರು. 

ಸಹ ಕುಲಪತಿ ಫರಾದ್ ಯೆನೆಪೋಯ, ಉಪ ಕುಲಪತಿ ಡಾ. ಎಂ ವಿಜಯಕುಮಾರ್, ಸಹ ಉಪಕುಲಪತಿ ಡಾ. ರಘುವೀರ್, ಕುಲಸಚಿವರಾದ ಡಾ. ಗಂಗಾಧರ್ ಸೋಮಯಾಜಿ, ಯೆನೆಪೋಯ ಆಸ್ಪತ್ರೆ ಸಮೂಹದ ಹಿರಿಯ ಸಲಹೆಗಾರರಾದ ಡಾ. ಎಂ. ಎ. ವಾಣಿ ಹಾಗೂ ವೈದ್ಯಕೀಯ ಅಧೀಕ್ಷಕರಾದ ಡಾ. ಎಸ್. ಪದ್ಮನಾಭ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಮಾರಂಭದಲ್ಲಿ ಯೆನೆಪೋಯ ಮೆಡಿಕಲ್  ಕಾಲೇಜು ಆಸ್ಪತ್ರೆ ಮಾಜಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಪ್ರಸಕ್ತ ಯೆನೆಪೋಯ ಆಸ್ಪತ್ರೆಯ ಸಮೂಹದ ಹಿರಿಯ ಸಲಹೆಗಾರರಾದ ಡಾ. ಮೊಹಮ್ಮದ್ ಅಮೀನ್ ವಾಣಿಯವರನ್ನು ಅವರು ಆಸ್ಪತ್ರೆಗೆ ಒದಗಿಸಿದ ನಾಯಕತ್ವ ಹಾಗೂ ಕೊಡುಗೆಗಾಗಿ ಸನ್ಮಾಸಲಾಯಿತು. ಇವರ ಜೊತೆಗೆ ಆಸ್ಪತ್ರೆಯ ತಂಡದ ಮುಖ್ಯ  ಸದಸ್ಯರುಗಳನ್ನು  ಅವರು ನೀಡಿದ  ಸೇವೆಗಾಗಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News