ಪಾಕ್ ಕ್ರೈಸ್ತ ಮಹಿಳೆ ಆಸಿಯಾ ಬೀಬಿ ಕೆನಡಕ್ಕೆ

Update: 2019-05-08 17:26 GMT

ಇಸ್ಲಾಮಾಬಾದ್, ಮೇ 8: ಇತ್ತೀಚೆಗೆ ದೇವನಿಂದನೆ ಆರೋಪದಿಂದ ಸುಪ್ರೀಂ ಕೋರ್ಟ್‌ನಿಂದ ದೋಷಮುಕ್ತಿಗೊಂಡ ಪಾಕಿಸ್ತಾನದ ಕ್ರೈಸ್ತ ಮಹಿಳೆ ಆಸಿಯಾ ಬೀಬಿ ದೇಶವನ್ನು ತೊರೆದಿದ್ದಾರೆ ಎಂದು ಅವರ ವಕೀಲರು ಬುಧವಾರ ಹೇಳಿದ್ದಾರೆ.

‘‘ಸಂಬಂಧಪಟ್ಟ ಅಧಿಕಾರಿಗಳಲ್ಲಿ ಈ ಬಗ್ಗೆ ವಿಚಾರಿಸಿದಾಗ, ಅವರು ಕೆನಡಕ್ಕೆ ಹೋಗಿದ್ದಾರೆ ಎಂದು ಅವರು ಹೇಳಿದ್ದಾರೆ’’ ಎಂದು ಆಸಿಯಾ ಬೀಬಿಯ ವಕೀಲ ಸೈಫ್ ಉಲ್ ಮಲೂಕ್ ‘ರಾಯ್ಟರ್ಸ್’ ಸುದ್ದಿ ಸಂಸ್ಥೆಗೆ ತಿಳಿಸಿದರು.

ಪಾಕಿಸ್ತಾನದ ಟಿವಿ ಚಾನೆಲ್‌ಗಳಾದ ಜಿಯೋ ಮತ್ತು ಎಆರ್‌ವೈ ಕೂಡ, ಆಸಿಯಾ ದೇಶವನ್ನು ತೊರೆದಿದ್ದಾರೆ ಎಂಬುದಾಗಿ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿವೆ.

ಪಾಕಿಸ್ತಾನದ ವಿದೇಶ ಸಚಿವಾಲಯ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.

ದೇವನಿಂದನೆಯ ಸುಳ್ಳು ಪ್ರಕರಣದಲ್ಲಿ ಕೆಳ ನ್ಯಾಯಾಲಯವು ಆಸಿಯಾಗೆ ಮರಣ ದಂಡನೆ ಶಿಕ್ಷೆ ವಿಧಿಸಿತ್ತು. ಅದನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು. ಅಂತಿಮವಾಗಿ ಸುಪ್ರೀಂ ಕೋರ್ಟ್ ದೋಷಮುಕ್ತಗೊಳಿಸುವ ಮೊದಲು ಅವರು ಗಲ್ಲು ಶಿಕ್ಷೆಯನ್ನು ಎದುರು ನೋಡುತ್ತಾ ಎಂಟು ವರ್ಷಗಳನ್ನು ಜೈಲಿನಲ್ಲಿ ಕಳೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News