×
Ad

ಜಾಗತಿಕ ಮಾದಕ ದ್ರವ್ಯ ಮಂಡಳಿಗೆ ಭಾರತದ ಜಗ್ಜೀತ್ ಪುನರಾಯ್ಕೆ

Update: 2019-05-08 23:10 IST

ವಿಶ್ವಸಂಸ್ಥೆ, ಮೇ 8: ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಸಮಿತಿಯಲ್ಲಿ ನಡೆದ ಮತದಾನದಲ್ಲಿ, ಭಾರತದ ಜಗ್ಜೀತ್ ಪವಾಡಿಯ ಅಂತರ್‌ರಾಷ್ಟ್ರೀಯ ಮಾದಕದ್ರವ್ಯ ನಿಯಂತ್ರಣ ಮಂಡಳಿ (ಐಎನ್‌ಸಿಬಿ)ಗೆ ಐದು ವರ್ಷಗಳ ಅವಧಿಗೆ ಅತಿ ಹೆಚ್ಚು ಮತಗಳಿಂದ ಪುನರಾಯ್ಕೆಯಾಗಿದ್ದಾರೆ.

 ಮಂಗಳವಾರ 54 ಸದಸ್ಯರ ಸಮಿತಿಯಲ್ಲಿ ನಡೆದ ಮೊದಲ ಸುತ್ತಿನ ಮತದಾನದಲ್ಲಿ, ಪವಾಡಿಯ 44 ಮತಗಳನ್ನು ಪಡೆದರು. ಅವರು ತನ್ನ ಚೀನಾದ ಎದುರಾಳಿಯನ್ನು ಸೋಲಿಸಿದ್ದಾರೆ.

ಈ ವರ್ಷ ಮಂಡಳಿಯಿಂದ ತೆರವಾಗುವ 5 ಸ್ಥಾನಗಳಿಗಾಗಿ 15 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ವಿಜಯದೊಂದಿಗೆ ಭಾರತೀಯ ಅಭ್ಯರ್ಥಿ ಇನು ಐದು ವರ್ಷ ತನ್ನ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.

ಚೀನೀ ಅಭ್ಯರ್ಥಿ ಮೊದಲ ಸುತ್ತಿನಲ್ಲಿ 22 ಮತಗಳನ್ನಷ್ಟೇ ಪಡೆದರು ಹಾಗೂ ಎರಡನೇ ಸುತ್ತಿನಲ್ಲಿ 19 ಮತಗಳನ್ನು ಗಳಿಸಿದರು. ಆಯ್ಕೆಗೆ ಕನಿಷ್ಠ 28 ಮತಗಳ ಅಗತ್ಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News