ಲಂಕಾ ಸ್ಫೋಟ: 200 ಮಕ್ಕಳ ಮನೆಯಲ್ಲಿ ದುಡಿಯುವವರಿಲ್ಲ

Update: 2019-05-08 17:45 GMT

ಕೊಲಂಬೊ, ಮೇ 8: ಶ್ರೀಲಂಕಾದಲ್ಲಿ ನಡೆದ ಈಸ್ಟರ್ ರವಿವಾರದ ಸರಣಿ ಬಾಂಬ್ ಸ್ಫೋಟಗಳಲ್ಲಿ ಸುಮಾರು 200 ಮಕ್ಕಳು ತಮ್ಮ ಕುಟುಂಬ ಸದಸ್ಯರನ್ನು ಕಳೆದುಕೊಂಡಿದ್ದಾರೆ ಹಾಗೂ ಅವರ ಪೈಕಿ ಕೆಲವರು ಕುಟುಂಬದ ಏಕೈಕ ದುಡಿಮೆಗಾರರಾಗಿದ್ದರು ಎಂದು ಕೊಲಂಬೋದಲ್ಲಿರುವ ಶ್ರೀಲಂಕಾ ರೆಡ್ ಕ್ರಾಸ್ ಸೊಸೈಟಿ (ಎಸ್‌ಎಲ್‌ಆರ್‌ಸಿಎಸ್) ಹೇಳಿದೆ.

 ಕೆಲವು ಕುಟುಂಬಗಳು ತಮ್ಮ ಆದಾಯ ಮೂಲವನ್ನೇ ಕಳೆದುಕೊಂಡಿವೆ ಹಾಗೂ ತಮ್ಮ ಸಾಮಾನ್ಯ ಜೀವನವನ್ನು ಪುನರಾರಂಭಿಸಲು ಅವರ ಬಳಿ ಸಾಕಷ್ಟು ಉಳಿಕೆಯೂ ಇರಲಾರದು ಎಂದು ಅದು ತಿಳಿಸಿದೆ.

ಕುಟುಂಬ ಸದಸ್ಯರಿಗೆ ಆಗಿರುವ ಗಾಯಗಳ ಹಿನ್ನೆಲೆಯಲ್ಲಿ, 75 ಕುಟುಂಬಗಳ ಜೀವನೋಪಾಯಕ್ಕೆ ತೊಂದರೆಯಾಗಿದೆ.

ಎಪ್ರಿಲ್ 21ರಂದು ನಡೆದ ಸರಣಿ ಆತ್ಮಹತ್ಯಾ ಬಾಂಬ್ ಸ್ಫೋಟಗಳಲ್ಲಿ 258 ಜನರು ಮೃತಪಟ್ಟಿದ್ದಾರೆ ಹಾಗೂ 500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News