ಮೇ 10: ಮುಲ್ಕಿ ಕೊಲ್ನಾಡಿನ ಮಸ್ಜಿದ್ ಇಬ್ರಾಹೀಂ ಉದ್ಘಾಟನೆ
Update: 2019-05-09 14:44 IST
ಮುಲ್ಕಿ, ಮೇ 9: ಇಲ್ಲಿನ ಕೊಲ್ನಾಡಿನಲ್ಲಿ ಎಕ್ಸ್‌ಪರ್ಟೈಸ್ ಗ್ರೂಪ್‌ನ ಸಯೀದ್ ಕರ್ನಿರೆ ಅವರು ನಿರ್ಮಿಸಿದ ಮಸ್ಜಿದ್ ಇಬ್ರಾಹೀಂ ಮೇ 10ರಂದು ಮಧ್ಯಾಹ್ನ 12:45ಕ್ಕೆ ಉದ್ಘಾಟನೆಗೊಳ್ಳಲಿದೆ.
ಮೌಲವಿ ಝುಹೈರ್ ಚುಂಗತ್ತರ ಅವರು ಜುಮಾ ಖುತ್ಬಾ ನೆರವೇರಿಸುವರು. ಹಾಜಿ ಕೆ.ಎಸ್.ಸಯೀದ್ ಕರ್ನಿರೆ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟನೆ ತಿಳಿಸಿದೆ.