ಕದ್ರಿ ಮಂಜುನಾಥ ರಥಾರೋಹಣ - ಶ್ರೀ ಮನ್ಮಾಹಾರಥೋತ್ಸವ
Update: 2019-05-09 18:33 IST
ಮಂಗಳೂರು, ಮೇ 9: ಕದ್ರಿಯ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಮೇ 2ರಿಂದ ಆರಂಭವಾಗಿರುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅಷ್ಟೋತ್ತರ ಸಹಸ್ರ ಬ್ರಹ್ಮಕಲಶಾಭಿಷೇಕವು ಗುರುವಾರ ಸಂಪನ್ನಗೊಂಡಿತು. ಮಧ್ಯಾಹ್ನ ದೇವರ ರಥಾರೋಹಣಗೈಯಲಾಯಿತು. ಸಂಜೆ ದೇವರ ರಥೋತ್ಸವ ಜರಗಿ ಮಹಾದಂಡ ಜೋಡನೆಗೈಯಲಾಯಿತು.
ಕದ್ರಿ ಮಠಾಧಿಪತಿ ರಾಜಾನಿರ್ಮಲನಾಥ್ ಜಿ., ದೇವಳದ ವ್ಯವಸ್ಥಾಪನಾ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಡಾ.ಎ.ಜನಾರ್ದನ ಶೆಟ್ಟಿ, ಗೌರವಾಧ್ಯಕ್ಷ ವೇದವ್ಯಾಸ ಕಾಮತ್, ಕಾರ್ಯ ನಿರ್ವಹಣಾಧಿಕಾರಿ ಡಾ. ನಿಂಗಯ್ಯ, ಪ್ರಚಾರ ಸಮಿತಿಯ ಅಧ್ಯಕ್ಷ ಎಸ್. ಪ್ರದೀಪಕುಮಾರ ಕಲ್ಕೂರ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಾಘವೇಂದ್ರ ಭಟ್, ರಂಜನ್ ಕುಮಾರ್ ಬಿ.ಎಸ್., ಚಂದ್ರಕಲಾ ದೀಪಕ್, ಪುಷ್ಪಲತಾ ಶೆಟ್ಟಿ, ಹರಿನಾಥ ಜೋಗಿ, ದಿನೇಶ್ ದೇವಾಡಿಗ, ಸುರೇಶ್ ಕುಮಾರ್ ಕದ್ರಿ, ಮಾಜಿ ಮೇಯರ್‌ಗಳಾದ ಭಾಸ್ಕರ ಮೊಲಿ, ಶಶಿಧರ ಹೆಗ್ಡೆ ಸಹಿತ ವಿವಿಧ ಸಮಿತಿಗಳ ಸಂಚಾಲಕರು, ಸದಸ್ಯರು ಹಾಗೂ ಭಕ್ತ ಸಮೂಹ ಈ ಸಂದರ್ಭ ಉಪಸ್ಥಿರಿದ್ದರು.