×
Ad

ಬೆಳ್ತಂಗಡಿ: ಶಂಕರಾಚಾರ್ಯ ಜಯಂತಿ ಆಚರಣೆ

Update: 2019-05-09 22:24 IST

ಬೆಳ್ತಂಗಡಿ: ತಾಲೂಕು ಆಡಳಿತ ವತಿಯಿಂದ ಶಂಕರಾಚಾರ್ಯ ಜಯಂತಿ ಬೆಳ್ತಂಗಡಿ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಗುರುವಾರ ನಡೆಯಿತು. 

ಕಾರ್ಯಕ್ರಮವನ್ನು ತಹಶಿಲ್ದಾರ್ ಗಣಪತಿ ಶಾಸ್ತ್ರಿ ಉದ್ಘಾಟಿಸಿ ಶುಭ ಹಾರೈಸಿದರು. ವೇಣೂರು ಹೋಬಳಿಯ ಕಂದಾಯ ನಿರೀಕ್ಷಕ ಪವಾಡಪ್ಪ ಮಾತನಾಡಿ, ಶಂಕರಾಚಾರ್ಯರು 8ನೇ ಶತಮಾನದ ಸಮಾಜ ಸುಧಾರಕರು. ತನ್ನ  12ನೇ ವಯಸ್ಸಿನಲ್ಲಿ ಅಖಂಡ ಜ್ಞಾನವನ್ನು ಹೊಂದಿದ್ದು ಹಿಂದೂ ಧರ್ಮದ  ಭಗವದ್ಗೀತೆ, ರಾಮಾಯಣವನ್ನು ಬಾಲ್ಯದಲ್ಲಿಯೇ ಅಧ್ಯಯನ ನಡೆಸಿದವರು. ಒಂದರ್ಥದಲ್ಲಿ ಹಿಂದೂ ಧರ್ಮಕ್ಕೆ ಭಾಷ್ಯ ಬರೆದವರು. ಸಣ್ಣ ವಯಸ್ಸಿನಲ್ಲಿಯೇ ದೇಶವನ್ನು ಸುತ್ತಿ ಹಿಂದೂ ಧರ್ಮವನ್ನು ಸ್ಥಾಪಿಸಲು ಶ್ರಮಿಸಿದವರು ಎಂದರು.

ಇಲಾಖಾ ಸಿಬ್ಬಂದಿ ಹೇಮಾ ಶಂಕರಾಚಾರ್ಯರ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸತೀಶ್, ಮೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತ ಶಿವಶಂಕರ್, ಬೆಳ್ತಂಗಡಿ ನ.ಪಂ ಶಹರಿ ರೋಜ್‍ಗಾರ್‍ನ ಯೋಜನಾಧಿಕಾರಿ ವೆಂಕಟರಮಣ ಶರ್ಮ, ಉಪಸ್ಥಿತರಿದ್ದರು. ಸಿಬ್ಬಂದಿ ಶಂಕರ್ ಸ್ವಾಗತಿಸಿ ನಾರಾಯಣ ಗೌಡ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News