ಪುತ್ತೂರು: ಪೋಷಕರ ಯಡವಟ್ಟಿನಿಂದ 20 ನಿಮಿಷ ಕಾರಿನಲ್ಲೇ ಬಂಧಿಯಾದ ಮಗು

Update: 2019-05-09 17:01 GMT

ಪುತ್ತೂರು: ಪೋಷಕರು ಮಾಡಿದ ಯಡವಟ್ಟಿನಿಂದ ಸುಮಾರು 2 ವರ್ಷದ ಮಗು ಸುಮಾರು 20 ನಿಮಿಷ ಕಾಲ ಕಾರಿನಲ್ಲೇ ಬಂಧಿಯಾದ ಘಟನೆ ಪುತ್ತೂರಿನಲ್ಲಿ ನಡೆದಿದೆ.

ಬಟ್ಟೆ ಖರೀದಿಗೆ ಮಾರುತಿ ಸ್ವಿಪ್ಟ್ ಡಿಸೈರ್ ಕಾರಿನಲ್ಲಿ ಬಂದಿದ್ದ ಪೋಷಕರು ಮಗುವನ್ನು ಕಾರಿನಲ್ಲೇ ಬಿಟ್ಟು, ಕೀ ಕೂಡ ಅದರಲ್ಲೆ ಬಿಟ್ಟು ಜವುಳಿ ಅಂಗಡಿಗೆ ಹೋಗಿದ್ದರು. ಕಾರು ಆಟೋ ಲಾಕ್ ಆಗಿತ್ತು. ಇದೇ ಸಂದರ್ಭದಲ್ಲಿ ಮಗು ಕೂಡಾ ಕಾರಿನ ಕೀಯನ್ನು ಹಿಡಿದುಕೊಂಡು ಆಟ ಆಡುತ್ತಿತ್ತು. ವಿಷಯ ತಿಳಿದು ಜನರ ಗುಂಪು ಕಾರಿನ ಸುತ್ತು ಆವರಿಸಿದಾಗ ಮಗು ಅಳತೊಡಗಿತ್ತು. ಗಾಬರಿಗೊಂಡ ಪೋಷಕರು ಕಾರಿನ ಲಾಕ್ ತೆಗೆಯಲು ಪೇಚಾಡುತ್ತಿದ್ದರು. ಇದನ್ನು ಗಮನಿಸಿದ ಕೂರ್ನಡ್ಕ ಯೆಂಗ್ ಮೆನ್ಸ್ ನ ಅಧ್ಯಕ್ಷ ಸಿರಾಜ್ ಎ ಕೆ ಮತ್ತು ಜಾಸ್ಲಿ ಡಿಸೋಜ ಎಂಬವರು ಕಾರಿನ ಹಿಂಬದಿ ಎಡ ಬದಿಯಲ್ಲಿರುವ ಕನ್ನಡಿ ಒಡೆದು ಮಗುವನ್ನು ರಕ್ಷಿಸಿದ್ದಾರೆ.

ಮಹಾರಾಷ್ಟ್ರ ನೋಂದಾವಣೆ ಹೊಂದಿದ್ದ ಸ್ವಿಪ್ಟ್ ಡಿಸೈರ್ ಕಾರಿನಲ್ಲಿ ಅಂಗಡಿಗೆ ಬಂದ ಗ್ರಾಹಕರು ಯಾರೆಂದು ತಿಳಿದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News