ಪಾಕ್ ಬಾಲಕಿಯರನ್ನು ಚೀನಾಕ್ಕೆ ಸಾಗಿಸುವ ಜಾಲ ಭೇದಿಸಿದ ಪೊಲೀಸರು: 12 ಮಂದಿ ಬಂಧನ

Update: 2019-05-09 17:43 GMT

ಇಸ್ಲಾಮಾಬಾದ್, ಮೇ 9: ನಕಲಿ ಮದುವೆಗಳ ಹೆಸರಿನಲ್ಲಿ ಪಾಕಿಸ್ತಾನಿ ಯುವತಿಯರನ್ನು ಚೀನಾಕ್ಕೆ ಸಾಗಿಸುವ ವೇಶ್ಯಾವಾಟಿಕೆ ಜಾಲವೊಂದರ 12 ಸದಸ್ಯರನ್ನು ಪಾಕಿಸ್ತಾನದ ಅಧಿಕಾರಿಗಳು ಬಂಧಿಸಿದ್ದಾರೆ.

ಬಂಧಿತರು ಎಂಟು ಮಂದಿ ಚೀನಾ ರಾಷ್ಟ್ರೀಯರು ಮತ್ತು ನಾಲ್ವರು ಪಾಕಿಸ್ತಾನಿಯರಾಗಿದ್ದಾರೆ ಎಂದು ಪಾಕಿಸ್ತಾನದ ಫೆಡರಲ್ ಇನ್ವೆಸ್ಟಿಗೇಶನ್ ಏಜನ್ಸಿ (ಎಫ್‌ಐಎ)ಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 ‘‘ಚೀನಾಕ್ಕೆ ಕಳ್ಳಸಾಗಣೆಯಾಗುವ ಪಾಕಿಸ್ತಾನಿ ಮಹಿಳೆಯರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಹಾಗೂ ಈ ಮಹಿಳೆಯರನ್ನು ಅಲ್ಲಿ ವೇಶ್ಯಾವಾಟಿಕೆಗೆ ಬಳಸಲಾಗುತ್ತಿದೆ ಎಂಬ ಮಾಹಿತಿಯ ಆಧಾರದಲ್ಲಿ ಕಾರ್ಯಾಚರಣೆ ನಡೆಸಿ ಕಳ್ಳಸಾಗಣೆ ಜಾಲವನ್ನು ಭೇದಿಸಲಾಗಿದೆ’’ ಎಂದರು.

ಮುಖ್ಯವಾಗಿ ಪಾಕಿಸ್ತಾನದ ಕ್ರೈಸ್ತ ಅಲ್ಪಸಂಖ್ಯಾತ ಸಮುದಾಯದ ಸದಸ್ಯರನ್ನು ಗುರಿಯಾಗಿಸಿ, ಹಲವಾರು ವೇಶ್ಯಾವಾಟಿಕೆ ಗುಂಪುಗಳು ಕಾರ್ಯನಿರ್ವಹಿಸುತ್ತಿವೆ ಎಂದು ಅವರು ತಿಳಿಸಿದರು.

ಪಾಕಿಸ್ತಾನದಿಂದ ಮಹಿಳೆಯರು ಮತ್ತು ಬಾಲಕಿಯರನ್ನು ಚೀನಾಕ್ಕೆ ಕಳ್ಳಸಾಗಣೆ ಮಾಡಲಾಗುತ್ತಿದೆ ಎಂಬ ವರದಿಗಳನ್ನು ಪಾಕಿಸ್ತಾನ ಗಣನೆಗೆ ತೆಗೆದುಕೊಳ್ಳಬೇಕು ಎಂಬುದಾಗಿ ಮಾನವಹಕ್ಕುಗಳ ಸಂಘಟನೆ ಹ್ಯೂಮನ್ ರೈಟ್ಸ್ ವಾಚ್ ಎಚ್ಚರಿಸಿದ ಒಂದು ವಾರದ ಬಳಿಕ ಈ ಬೆಳವಣಿಗೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News