ಜಲಿಯನ್‌ವಾಲಾಬಾಗ್: ಮತ್ತೊಮ್ಮೆ ತೆರೇಸಾ ವಿಷಾದ
Update: 2019-05-09 23:27 IST
ಲಂಡನ್, ಮೇ 9: ಬ್ರಿಟನ್ ಪ್ರಧಾನಿಯ ಅಧಿಕೃತ ನಿವಾಸ 10, ಡೌನಿಂಗ್ ಸ್ಟ್ರೀಟ್‌ನಲ್ಲಿ ಬುಧವಾರ ನಡೆದ ವೈಸಾಖಿ ಸಮಾರಂಭದಲ್ಲಿ, ಬ್ರಿಟಿಶ್ ಪ್ರಧಾನಿ ತೆರೇಸಾ ಮೇ 1919ರ ಜಲಿಯನ್‌ವಾಲಾಬಾಗ್ ಹತ್ಯಾಕಾಂಡಕ್ಕಾಗಿ ಮತ್ತೊಮ್ಮೆ ಬ್ರಿಟಿಶ್ ಸರಕಾರದ ‘ತೀವ್ರ ವಿಷಾದ’ವನ್ನು ವ್ಯಕ್ತಪಡಿಸಿದರು.
‘‘ಅದು ಬ್ರಿಟಿಶ್ ಭಾರತೀಯ ಇತಿಹಾಸದಲ್ಲಿ ಆರದ ಗಾಯ’’ ಎಂಬುದಾಗಿ ಅವರು ಬಣ್ಣಿಸಿದರು.
‘‘ಪ್ರಥಮ ಸಿಖ್ ಗುರು ಗುರು ನಾನಕ್ ಅವರ 550ನೇ ಜನ್ಮದಿನಾಚರಣೆ 2019ರಲ್ಲಿ ಸಂಭವಿಸಿತು. ಆದರೆ, 2019 ಆಘಾತಕಾರಿ ಜಲಿಯನ್‌ವಾಲಾಬಾಗ್ ಹತ್ಯಾಕಾಂಡದ ಶತಮಾನವೂ ಹೌದು’’ ಎಂದು ತನ್ನ ನಿವಾಸದಲ್ಲಿ ನಡೆದ ಸಮುದಾಯ ಕಾರ್ಯಕ್ರಮದಲ್ಲಿ ತೆರೇಸಾ ಮೇ ಹೇಳಿದರು.