ಕರಾರು ಮುರಿದರೆ ಹೆಚ್ಚಿನ ಸುಂಕ: ಚೀನಾಕ್ಕೆ ಅಮೆರಿಕ ಎಚ್ಚರಿಕೆ

Update: 2019-05-09 18:02 GMT

 ಪನಾಮ ಸಿಟಿ ಬೀಚ್ (ಫ್ಲೋರಿಡ), ಮೇ 9: ಚೀನಾವು ಅಮೆರಿಕದೊಂದಿಗಿನ ವ್ಯಾಪಾರ ಮಾತುಕತೆಯಲ್ಲಿ ‘ಕರಾರನ್ನು ಮುರಿದಿದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಹೇಳಿದ್ದಾರೆ ಹಾಗೂ ಒಪ್ಪಂದವೊಂದು ಏರ್ಪಡದಿದ್ದರೆ ಅದು ಹೆಚ್ಚಿನ ಆಮದು ಸುಂಕಗಳನ್ನು ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದ್ದಾರೆ.

‘‘ಸುಂಕವನ್ನು ನಾವು ಹೇರುತ್ತಿದ್ದೇವೆ ಎಂದು ನೀವು ಭಾವಿಸಿರುವಿರಾ?’’ ಎಂದು ಫ್ಲೋರಿಡದಲ್ಲಿ ತನ್ನ ಬೆಂಬಲಿಗರ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್ ಹೇಳಿದರು.

‘‘ಅವರು ಕರಾರನ್ನು ಮುರಿದಿದ್ದಾರೆ. ಹಾಗಾಗಿ, ಅವರು ಇಲ್ಲಿಗೆ ಬರುತ್ತಿದ್ದಾರೆ. ಚೀನಾದ ಉಪ ಪ್ರಧಾನಿ ನಾಳೆ ಇಲ್ಲಿಗೆ ಬರುತ್ತಿದ್ದಾರೆ. ಆದರೆ, ಅವರು ಕರಾರು ಮುರಿದಿದ್ದಾರೆ. ಅವರು ಹಾಗೆ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ಅವರು ದಂಡ ತೆರುತ್ತಾರೆ. ಒಪ್ಪಂದ ಏರ್ಪಡದಿದ್ದರೆ, ವರ್ಷಕ್ಕೆ 100 ಬಿಲಿಯ ಡಾಲರ್‌ಗಿಂತಲೂ ಹೆಚ್ಚಿನ ಹಣವನ್ನು ಪಡೆಯುವುದರಲ್ಲಿ ತಪ್ಪಿಲ್ಲ’’ ಎಂದು ಟ್ರಂಪ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News