ಬಂಟಕಲ್ ಕಾಲೇಜಿನಲ್ಲಿ ಜಾಗತಿಕ ಆವಿಷ್ಕಾರ ಕೇಂದ್ರ ಉದ್ಘಾಟನೆ

Update: 2019-05-10 14:56 GMT

ಶಿರ್ವ, ಮೇ 10: ಜಾಗತಿಕ ಮಟ್ಟದಲ್ಲಿ ಹೊಸ ಆವಿಷ್ಕಾರಗಳನ್ನು ನಡೆಸುವ ಮತ್ತು ಉತ್ತೇಜಿಸುವ ಉದ್ದೇಶದಿಂದ ಬಂಟಕಲ್ಲಿನ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯವು ಡಿಟಿಎಫ್ ವೆಂಚರ್ಸ್‌ನ ಸಹಯೋಗದೊಂದಿಗೆ ಮಂಗಳೂರು ವಲಯದಲ್ಲೇ ಮೊದಲ ಬಾರಿಗೆ ಸ್ಥಾಪಿಸಿರುವ ಜಾಗತಿಕ ಆವಿಷ್ಕಾರ ಕೇಂದ್ರದ ಉದ್ಘಾಟನೆ ಮೇ 9ರಂದು ಕಾಲೇಜಿನ ಆವರಣದಲ್ಲಿ ಜರಗಿತು.

ಕೇಂದ್ರವನ್ನು ಡಿಟಿಎಫ್ ವೆಂಚರ್ಸ್‌ನ ಮುಖ್ಯ ಕಾರ್ಯತಂತ್ರಾಧಿಕಾರಿ ಜಯ್ ಸಿನ್ಹ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಡಿಟಿಎಫ್ ವೆಂಚರ್ಸ್‌ ವಾಣಿಜ್ಯ ವಿಭಾಗದ ನಿರ್ದೇಶಕಿ ಚಿನಾಂಶ ಮಾತನಾಡಿದರು. ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದ ಕಾರ್ಯದರ್ಶಿ ರತ್ನಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ಬೆಂಗಳೂರು ಅಕ್ಸಲರೇಟ್‌ನ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಅಮಿತ್ ಕುಮಾರ್, ಮುಂಬೈಯ ವಾಸುತಿಶಿಲ್ಪ ಶಾಸ್ತ್ರಜ್ಞ ನಿಶ್ಚಿಲ್ ಶೆಟ್ಟಿ, ಹೈದರಾಬಾದ್‌ನ ಶಿಕ್ಷಣ ತಜ್ಞೆ ವಸುಂದರಾ ಸೊಂತಿ, ದೆಹಲಿಯ ಕೆರಿಯರ್ ಕಾರ್ನಿವಲ್‌ಗಳಾದ ದೆವೇಂದ್ರ ಶರ್ಮ, ಡಾ.ಪಲ್ಲವಿ ಘೋಷ್, ಸ್ಮಾರ್ಟ್ ರೆಸ್ಪೋನ್ಸ್ ಸರ್ವಿಸಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಪಿ.ಸಿನ್ಹ, ಮಂಗಳೂರು ಮಥಾಯಿಸ್ ಪ್ರೊಪರಿಟೀಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗ್ರೋಗರಿ ಮಥಾಯಿಸ್ ಉಪಸ್ಥಿತರಿದ್ದರು.

ಸಂಸ್ಥೆಯ ಪ್ರಾಂಶುಪಾಲ ಡಾ.ತಿರುಮಲೇಶ್ವರ ಭಟ್ ಸ್ವಾಗತಿಸಿದರು. ವಿದ್ಯುನ್ಮಾನ ಮತ್ತು ಸಂವಹ ವಿಭಾಗದ ಅರುಣ್ ಉಪಾಧ್ಯಾಯ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News