ಪ್ರಧಾನಿ ಹುದ್ದೆಯ ಆಕಾಂಕ್ಷಿಯೇ ಎಂಬ ಪ್ರಶ್ನೆಗೆ ಗಡ್ಕರಿ ಉತ್ತರ

Update: 2019-05-10 16:53 GMT

ಹೊಸದಿಲ್ಲಿ, ಮೇ 10: ಪ್ರಧಾನಿ ಹುದ್ದೆಗೆ ತಾನು ‘ಕಪ್ಪು ಕುದುರೆ’ (ಆಕಾಂಕ್ಷಿ) ಅಲ್ಲ. ಪ್ರಧಾನಿ ಆಗಬೇಕೆಂಬ ಯಾವುದೇ ಉದ್ದೇಶ, ಆಸೆ, ಕನಸು ನನಗಿಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಶುಕ್ರವಾರ ಹೇಳಿದ್ದಾರೆ.

ಸ್ಪಷ್ಟ ಬಹುಮತ ಸಿಗದೇ ಮಿತ್ರ ಪಕ್ಷಗಳನ್ನು ಅವಲಂಬಿಸಬೇಕಾದ ಸಂದರ್ಭ ಬಂದರೆ, ಇತರರನ್ನು ಬಿಜೆಪಿ ಪ್ರಧಾನಿ ಹುದ್ದೆಗೆ ಆಯ್ಕೆ ಮಾಡುವ ಸಾಧ್ಯತೆ ಬಗೆಗಿನ ವದಂತಿ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗಡ್ಕರಿ, ನರೇಂದ್ರ ಮೋದಿ ಅವರು ನಮ್ಮ ನಾಯಕ. ಅವರೇ ಪ್ರಧಾನ ಮಂತ್ರಿ ಎಂದಿದ್ದಾರೆ. ಬಿಜೆಪಿ ನೇತೃತ್ವದ ಎನ್‌ಡಿಎ ಸ್ಪಷ್ಟ ಬಹುಮತದೊಂದಿಗೆ ಜಯ ಗಳಿಸಲಿದೆ ಹಾಗೂ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಸರಕಾರ ರಚನೆಯಾಗಲಿದೆ ಎಂದು ಗಡ್ಕರಿ ಹೇಳಿದರು.

 ‘‘ನಾವು ಎನ್‌ಡಿಎ ಸರಕಾರ ರೂಪಿಸಲಿದ್ದೇವೆ. ಬಿಜೆಪಿ ಸರಕಾರ ಅಲ್ಲ. ಒಂದು ವೇಳೆ ನಾವು ಸ್ಪಷ್ಟ ಬಹುಮತದಲ್ಲಿ ಜಯ ಗಳಿಸಿದರೆ ಕೂಡ ನಾವು ಅದನ್ನು ಎನ್‌ಡಿಎ ಸರಕಾರವೆಂದೇ ಪರಿಗಣಿಸಲಿದ್ದೇವೆ ಹಾಗೂ ಮಿತ್ರ ಪಕ್ಷಗಳನ್ನು ಜೊತೆಯಲ್ಲಿ ಕರೆದೊಯ್ಯಲಿದ್ದೇವೆ’’ ಎಂದು ಅವರು ಹೇಳಿದರು. ಬಿಜೆಪಿ ಹೆಚ್ಚು ಕ್ಷೇತ್ರಗಳಲ್ಲಿ ಜಯ ಗಳಿಸುವುದು ಹೇಗೆ ಎಂಬ ಬಗ್ಗೆ ವಿವರಣೆ ನೀಡುವಂತೆ ಕೇಳಿದಾಗ ಗಡ್ಕರಿ, ಪಕ್ಷ ಒಡಿಶಾ, ಪಶ್ಚಿಮಬಂಗಾಳ ಹಾಗೂ ಕೇರಳದಲ್ಲಿ ಹೆಚ್ಚು ಸ್ಥಾನಗಳನ್ನು ಪಡೆದುಕೊಳ್ಳಲಿದೆ ಎಂದರು. ರಾಜಕೀಯದಲ್ಲಿ ಎರಡು ಪ್ಲಸ್ ಎರಡು ಎಲ್ಲವೂ ಅಲ್ಲ. ಎರಡು ಪ್ಲಸ್ ಎರಡು ನಾಲ್ಕು ಅಲ್ಲ. ಅದು ಮೂರು ಎಂದು ಗಡ್ಕರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News