ವಿಶ್ವಸಂಸ್ಥೆಯ ಅಭಿವೃದ್ಧಿ ಗುರಿ ಜಾರಿ ರಾಯಭಾರಿಯಾಗಿ ದಿಯಾ ಮಿರ್ಝಾ

Update: 2019-05-10 18:06 GMT

ವಿಶ್ವಸಂಸ್ಥೆ, ಮೇ 10: ಮಹತ್ವಾಕಾಂಕ್ಷೆಯ ‘ಸಹ್ಯ ಅಭಿವೃದ್ಧಿ ಗುರಿ’ (ಸಸ್ಟೇನಬಲ್ ಡೆವಲಪ್‌ಮೆಂಟ್ ಗೋಲ್- ಎಸ್‌ಡಿಜಿ)ಗಳ ಜಾರಿಗಾಗಿ ಜಾಗತಿಕ ರಾಜಕೀಯ ಇಚ್ಛಾಶಕ್ತಿಯನ್ನು ಬಲಪಡಿಸುವ ನೂತನ ರಾಯಭಾರಿಯಾಗಿ ವಿಶ್ವಸಂಸ್ಥೆ ಮಹಾಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಬಾಲಿವುಡ್ ನಟಿ ದಿಯಾ ಮಿರ್ಝಾರನ್ನು ನೇಮಿಸಿದ್ದಾರೆ.

ಚೀನಾದ ಆಲಿಬಾಬ ಕಂಪೆನಿಯ ಮುಖ್ಯಸ್ಥ ಜಾಕ್ ಮಾ ಸೇರಿದಂತೆ ಒಟ್ಟು 17 ಮಂದಿಯನ್ನು ರಾಯಭಾರಿಗಳನ್ನಾಗಿ ನೇಮಿಸಲಾಗಿದೆ.

‘‘ನೂತನ 17 ರಾಯಭಾರಿಗಳು ಪ್ರಭಾವಿ ಸಾರ್ವಜನಿಕ ವ್ಯಕ್ತಿಗಳಾಗಿದ್ದು, ಜಾಗೃತಿ ನಿರ್ಮಿಸುವ, ಹೆಚ್ಚಿನ ಮಹತ್ವಾಕಾಂಕ್ಷೆಯನ್ನು ಹುಟ್ಟಿಸುವ ಹಾಗೂ ಸಹ್ಯ ಅಭಿವೃದ್ಧಿ ಗುರಿಗಳ ವಿಷಯದಲ್ಲಿ ಕ್ಷಿಪ್ರ ಕ್ರಮಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ’’ ಎಂದು ವಿಶ್ವಸಂಸ್ಥೆಯ ವಕ್ತಾರರ ಕಚೇರಿ ಬಿಡುಗಡೆ ಮಾಡಿದ ಹೇಳಿಕೆಯೊಂದು ತಿಳಿಸಿದೆ.

ಸಹ್ಯ ಅಭಿವೃದ್ಧಿ ಗುರಿಗಳನ್ನು 2015 ಸೆಪ್ಟಂಬರ್ 25ರಂದು ಜಾಗತಿಕ ನಾಯಕರು ಅಂಗೀಕರಿಸಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News