ತಾಂತ್ರಿಕ ಸಮಸ್ಯೆಯಿಂದ ಬೋಟಿಗೆ ಹಾನಿ: ಲಕ್ಷಾಂತರ ರೂ. ನಷ್ಟ

Update: 2019-05-11 12:32 GMT

ಮಲ್ಪೆ, ಮೇ 11: ಮಲ್ಪೆ ಪಡುಕೆರೆ ಶಾಂತಿ ನಗರ ಸಮುದ್ರದಲ್ಲಿ ಮೇ 9ರಂದು ತಾಂತ್ರಿಕ ಸಮಸ್ಯೆಯಿಂದ ಮೀನುಗಾರಿಕಾ ಬೋಟಿಗೆ ಹಾನಿಯಾಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿರುವ ಬಗ್ಗೆ ವರದಿಯಾಗಿದೆ.

ಕುಂದಾಪುರ ಕೋಟೇಶ್ವರದ ವಿಠಲ ಮರಕಾಲ ಎಂಬವರ ಅಮೃತೇಶ್ವರಿ ಹೆಸರಿನ ಬೋಟು ಮೀನುಗಾರಿಕೆಗೆ ತೆರಳುತ್ತಿದ್ದಾಗ ಸಮುದ್ರದಲ್ಲಿ ಇಂಜಿನ್ ಕೆಟ್ಟು ಹೋಗಿ ಗಾಳಿ ಹಾಗೂ ಅಲೆಗಳ ರಭಸ್ಕೆ ಬೋಟಿನ ತಳಭಾಗ ಜಖಂಗೊಂಡಿದೆ.

ಇದರ ಪರಿಣಾಮ ಬೋಟು ಸಮುದ್ರ ತೀರಕ್ಕೆ ತೇಲಿ ಬಂದು ಹೊಯಿಗೆ ಯಲ್ಲಿ ಹೂತು ಹೋಗಿದೆ ಎನ್ನಲಾಗಿದೆ. ಇದರಿಂದ ಇಂಜಿನಿನ್ ಕೊಠಡಿ ಯೊಳಗೆ ನೀರು ಹಾಗೂ ಮರಳು ತುಂಬಿ 20ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ದೂರಲಾಗಿದೆ. ಈ ಕುರಿತು ಮಲ್ಪೆ ಪೊಲೀಸರು ಮಹಜರು ನಡೆಸಿದ್ದು, ನಷ್ಟದ ಅಂದಾಜನ್ನು ವಿುೀನುಗಾರಿಕಾ ಇಲಾಖೆಗೆ ಸಲ್ಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News