×
Ad

ಮಲ್ಪೆ: ಬಲೆಗೆ ಬಿದ್ದ ಬರೋಬರಿ 1200 ಕೆ.ಜಿ. ತೂಕದ ತೊರಕೆ ಮೀನು !

Update: 2019-05-11 20:36 IST

ಮಲ್ಪೆ, ಮೇ 11: ಆಳ ಸಮುದ್ರ ಮೀನುಗಾರಿಕೆ ತೆರಳಿದ್ದ ಮಲ್ಪೆಯ ಬೋಟೊಂದಕ್ಕೆ ಬರೋಬರಿ 1200 ಕೆ.ಜಿ. ತೂಕದ ಬೃಹತ್ ಗಾತ್ರದ ತೊರಕೆ ಮೀನು ದೊರೆತಿದೆ.

ಮಲ್ಪೆ ಕೊಳ ನಿವಾಸಿ ಮಿಥುನ್ ಕುಂದರ್ ಎಂಬವರ ವಿಘ್ನರಾಜ-2 ಎಂಬ ಹೆಸರಿನ ಬೋಟು 10 ದಿನಗಳ ಹಿಂದೆ ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿತ್ತು. ಮೂರು ದಿನಗಳ ಹಿಂದೆ ಸುಮಾರು 100 ಮೀಟರ್ ಆಳದ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಇವರ ಬಲೆಗೆ ಬಹೃತ್ ಗಾತ್ರ ತೊರಕೆ ಮೀನು ಸಿಕ್ಕಿದೆ. ತುಳುವಿನಲ್ಲಿ ಇದನ್ನು ಕೊಂಬು ತೊರಕೆ ಎಂದು ಕರೆಯಲಾಗುತ್ತದೆ.

ಬೋಟಿನಲ್ಲಿದ್ದ 10 ಜನ ಮೀನುಗಾರರು ಮೀನನ್ನು ಬೋಟಿಗೆ ಎಳೆಯಲು ಹರಸಾಹಸ ಪಟ್ಟರು. ಇಂದು ಬೆಳಗ್ಗೆ ಬೋಟು ಮಲ್ಪೆ ಬಂದರಿಗೆ ಆಗಮಿಸಿದ್ದು, ಕ್ರೇನ್ ಮೂಲಕ ಮೀನನ್ನು ಎತ್ತಿ ಬಂದರಿಗೆ ಸಾಗಿಸಲಾಯಿತು. ಸುಮಾರು 1200 ಕೆ.ಜಿ. ತೂಕದ ಈ ಮೀನನ್ನು ಮಂಗಳೂರಿನ ಒಣ ಮೀನು ವಾಪ್ಯಾರಿಯೊಬ್ಬರಿಗೆ ಕೆ.ಜಿ.ಗೆ 50ರೂ.ನಂತೆ ಒಟ್ಟು 60ಸಾವಿರ ರೂ.ಗೆ ಮಾರಾಟ ಮಾಡಲಾಯಿತು ಎಂದು ಮಾಲಕ ಮಿಥುನ್ ಕುಂದರ್ ತಿಳಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News