ರಾಜಕೀಯ ಲಾಭಕ್ಕಾಗಿ ಮೋದಿ ದಿವಂಗತ ರಾಜಕೀಯ ನಾಯಕರನ್ನು ಮರಳಿ ತರುವರು: ಚಂದ್ರಬಾಬು ನಾಯ್ಡು

Update: 2019-05-11 16:12 GMT

ಅಮರಾವಾತಿ, ಮೇ 11: ರಾಜಕೀಯ ಲಾಭಕ್ಕಾಗಿ ರಾಜಕೀಯ ನಾಯಕರನ್ನು ಹತ್ಯೆ ನಡೆಸುವ ಅಥವಾ ದಿವಂಗತ ರಾಜಕೀಯ ನಾಯಕರನ್ನು ಹಿಂದೆ ತರುವ ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಹೇಳಿದ್ದಾರೆ.

ಮೋದಿ ಅವರು ನಮಗೆ ಸದಾಚಾರ ಬೋಧಿಸಲು ಪ್ರಯತ್ನಿಸುತ್ತಾರೆ. ಆದರೆ, ಅವರು ಸತ್ತ ರಾಜಕೀಯ ನಾಯಕರನ್ನು ರಾಜಕೀಯಕ್ಕೆ ತರುವ ವ್ಯಕ್ತಿ. ರಾಜಕೀಯ ಲಾಭಕ್ಕಾಗಿ ಅವರು ರಾಜಕೀಯ ಕುಟುಂಬದ ನಾಯಕರನ್ನು ಪದಚ್ಯುತಿಗೊಳಿಸಬಹುದು. ಅವರು ಈಗಾಗಲೇ ರಕ್ಷಣಾ ಇಲಾಖೆ ಹಾಗೂ ಭಾರತೀಯ ಸೇನೆಯನ್ನು ಬಳಸಿಕೊಂಡಿದ್ದಾರೆ. ಅವರು ರಾಜಕೀಯ ಲಾಭಕ್ಕಾಗಿ ಧಾರ್ಮಿಕ ಯುದ್ಧಕ್ಕೆ ಉತ್ತೇಜನ ನೀಡಲು, ರಾಜಕಾರಣಿಗಳನ್ನು ಹತ್ಯೆಗೈಯಲು ಹಿಂಜರಿಯಲಾರರು ಎಂದು ನಾಯ್ಡು ಅವರು ತಮ್ಮ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಶುಕ್ರವಾರ ಬರೆದುಕೊಂಡಿದ್ದಾರೆ.

ಚುನಾವಣಾ ಆಯೋಗ ಬಿಜೆಪಿ ನಿರ್ದೇನದಂತೆ ಕಾರ್ಯ ನಿರ್ವಹಿಸುತ್ತಿದೆ ಎಂದು ಅವರು ಆರೋಪಿಸಿದರು. ‘‘ನಮ್ಮ ಪ್ರತಿಭಟನೆ ಚುನಾವಣಾ ಆಯೋಗದ ಬಗ್ಗೆ ಅಲ್ಲ. ಮಾದರಿ ನೀತಿ ಸಂಹಿತೆ ವಿಷಯದಲ್ಲಿ ಮೋದಿ ಹಾಗೂ ಅಮಿತ್ ಶಾ ಅವರ ಪರವಾಗಿ ವರ್ತಿಸುತ್ತಿರುವ ಅಧಿಕಾರಿಗಳ ಬಗ್ಗೆ’’ ಎಂದು ಅವರು ಹೇಳಿದರು.

ಶೇ. 50 ವಿವಿ ಪ್ಯಾಟ್‌ಗಳ ಚೀಟಿಯನ್ನು ಇವಿಎಂಗಳೊಂದಿಗೆ ತುಲನೆ ಮಾಡುವಂತೆ ಎಲ್ಲ ಪ್ರಮುಖ ಪ್ರತಿಪಕ್ಷಗಳು ಚುನಾವಣಾ ಆಯೋಗದಲ್ಲಿ ಮನವಿ ಮಾಡಿದೆ. ಆದರೆ ಇದನ್ನು ಚುನಾವಣಾ ಆಯೋಗ ನಿರಾಕರಿಸಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಚುನಾವಣಾ ಆಯೋಗದ ನಡುವಿನ ಸಂಬಂಧ ಏನು ? ವಿವಿ ಪ್ಯಾಟ್‌ಗಳ ಚೀಟಿಗಳನ್ನು ಎಣಿಕೆ ಮಾಡಬೇಕೆಂದು ನಾವು ಧ್ವನಿ ಎತ್ತಿದಾಗ ಮೋದಿ ಅವರು ಆತಂಕಗೊಳ್ಳುತ್ತಾರೆ. ಚುನಾವಣಾ ಆಯೋಗ ಕೂಡ ಅವರ ಜೊತೆ ನಿಲ್ಲುತ್ತದೆ ಎಂದು ಚಂದ್ರಬಾಬು ನಾಯ್ಡು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News