×
Ad

ಸಹಕಾರ ಭಾರತಿ ಪ್ರಭಾವ ನೂರು ಪಟ್ಟು ಹೆಚ್ಚಾಗಲಿದೆ: ರಮೇಶ್ ವೈದ್ಯ

Update: 2019-05-11 21:26 IST

ಉಡುಪಿ, ಮೇ 11: ಇಂದು ಸಹಕಾರ ಭಾರತಿ ಒಂದು ಶಕ್ತಿಯಾಗಿ ಬೆಳೆದಿದ್ದು, ಮುಂದಿನ ಐದು ವರ್ಷಗಳಲ್ಲಿ ಸಹಕಾರ ಭಾರತಿಯ ಪ್ರಭಾವ ನೂರು ಪಟ್ಟು ಹೆಚ್ಚಾಗಲಿದೆ ಎಂದು ಸಹಕಾರ ಭಾರತಿಯ ರಾಷ್ಟ್ರೀಯ ಅಧ್ಯಕ್ಷ ರಮೇಶ್ ವೈದ್ಯ ಹೇಳಿದ್ದಾರೆ.

ಮೊದಲ ಬಾರಿಗೆ ಉಡುಪಿ ಜಿಲ್ಲೆಗೆ ಆಗಮಿಸಿದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಸಹಕಾರಿ ಭಾರತಿ ವತಿಯಿಂದ ಶನಿವಾರ ಉಡುಪಿಯ ಭಾರತೀಯ ಕಿಸಾನ್ ಸಂಘದ ಕಚೇರಿಯಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡುತಿದ್ದರು.

ಕಾರ್ಯಕರ್ತರ ಹೊರತಾಗಿ ಸಂಘಟನೆ ಬೆಳೆಯಲು ಸಾಧ್ಯವಿಲ್ಲ. ಅವರ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು ಸಂಘಟನೆ ಕಾರ್ಯಗಳನ್ನು ಅವರಿಗೆ ಒಪ್ಪಿಸಬೇಕು. ತಪ್ಪು ನಿರ್ಧಾರವನ್ನು ಎಲ್ಲರು ತೆಗೆದುಕೊಳ್ಳುತ್ತಾರೆ. ಆದರೆ ಅದರ ಹಿಂದಿನ ಉದ್ದೇಶ ಮಾತ್ರ ಒಳ್ಳೆಯದಾಗಿರಬೇಕು ಎಂದರು.

ಮೊದಲು ಸಹಕಾರ ಭಾರತಿಯಲ್ಲಿ ಶೇ.70ರಷ್ಟು ಹಿರಿಯರಿದ್ದರೆ, ಶೇ.30ರಷ್ಟು ಯುವಕರಿದ್ದರು. ಆದರೆ ಇಂದು ಬದಲಾಗಿ ಶೇ.70ರಷ್ಟು ಯುವಕರಿಂದ ಕೂಡಿದ ಸಹಕಾರ ಭಾರತಿಯಲ್ಲಿ ಎರಡನೆ ಹಂತದ ನಾಯಕರು ಬಹಳ ಬಲಿಷ್ಠ ವಾಗಿ ರೂಪುಗೊಳ್ಳುತ್ತಿದ್ದಾರೆ ಎಂದು ಅವರು ತಿಳಿಸಿದರು.

ವೇದಿಕೆಯಲ್ಲಿ ಸಹಕಾರ ಭಾರತಿಯ ಜಿಲ್ಲಾಧ್ಯಕ್ಷ ಬೋಳ ಸದಾಶಿವ ಶೆಟ್ಟಿ, ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯ ರವಿರಾಜ್ ಹೆಗ್ಡೆ, ಜಿಲ್ಲಾ ಸಂಘಟನಾ ಪ್ರಮುಖ್ ಭರತ್ ಉಪಸ್ಥಿತರಿದ್ದರು. ಸಹಕಾರ ಭಾರತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಮಧುಸೂದನ ನಾಯಕ್ ಸ್ವಾಗತಿಸಿ ದರು.

ಜಿಲ್ಲಾ ಸಂಘಟನಾ ಪ್ರಮುಖ್ ಎಸ್.ಕೆ.ಮಂಜು ನಾಥ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News