ಅಜ್ಜರಕಾಡು; ಹುಚ್ಚು ನಾಯಿಗಳ ಹಾವಳಿ: ಬಾಲಕಿಗೆ ಕಡಿತ
ಉಡುಪಿ, ಮೇ 11: ಅಜ್ಜರಕಾಡು ಭುಜಂಗ ಪಾರ್ಕಿನಲ್ಲಿ ಹುಚ್ಚು ನಾಯಿ ಗಳ ಹಾವಳಿ ಹೆಚ್ಚಾಗಿದ್ದು, ಇಂದು ಬಾಲಕಿಯೊಬ್ಬಳಿಗೆ ನಾಯಿ ಕಚ್ಚಿರುವ ಬಗ್ಗೆ ವರದಿಯಾಗಿದೆ.
ಸುಮಾರು 10 ವರ್ಷದ ಬಾಲಕಿ ಬೈಕಾಡಿಯ ನವ್ಯ ಭುಜಂಗ ಪಾರ್ಕಿನಲ್ಲಿ ಜಾರುಬಂಡಿಯಲ್ಲಿ ಆಟ ಆಡುತ್ತಿರುವಾಗ ನಾಯಿ ಕಚ್ಚಿದ್ದು, ಬಾಲಕಿ ಅಜ್ಜರ ಕಾಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾಳೆ ಎಂದು ತಿಳಿದು ಬಂದಿದೆ.
ಪಾರ್ಕಿನಲ್ಲಿ 40ಕ್ಕೂ ಅಧಿಕ ಬೀದಿ ನಾಯಿಗಳು ನೆಲೆ ಕಂಡಿದ್ದು, ಕೆಲವು ನಾಯಿಗಳಿಗೆ ಹುಚ್ಚು ಹಿಡಿದಿರುವ ಬಗ್ಗೆ ದೂರುಗಳು ಕೇಳಿಬಂದಿವೆ. ಹಲವು ಮಂದಿ ಸಾರ್ವಜನಿಕರಿಗೆ ಹುಚ್ಚು ನಾಯಿ ಕಚ್ಚಿರುವ ಬಗ್ಗೆ ವರದಿಯಾಗಿದೆ. ಇದರ ಪರಿಣಾಮ ಹಿರಿಯ ನಾಗರಿಕರು, ವಾಯು ವಿಹಾರಿಗಳು, ಜಾರು ಬಂಡಿಯಲ್ಲಿ ಆಡಲು ಬರುವ ಮಕ್ಕಳು ಭಯಭೀತರಾಗಿದ್ದಾರೆ. ನಗರಸಭೆ ಪೌರಾಯುಕ್ತರು ಇದರತ್ತ ಗಮನಹರಿಸಿ ಸೂಕ್ತ ಕ್ರಮ ಜರುಗಿಸಬೇಕೆಂದು ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಆಗ್ರಹಿಸಿದ್ದಾರೆ.