×
Ad

‘ರಾಜಕೀಯ’ ಪ್ರಸಾರ: ನಮೋ ಟಿವಿಗೆ ನೋಟಿಸ್

Update: 2019-05-11 23:01 IST

 ಹೊಸದಿಲ್ಲಿ, ಮೇ 11: ‘ಮೌನ ಅವಧಿ’ ಆರಂಭವಾದ ಬಳಿಕ ನಮೋ ಟಿವಿಯಲ್ಲಿ ಚುನಾವಣಾ ಸಂಬಂಧಿ ಅಂಶಗಳನ್ನು ಪ್ರಸಾರ ಮಾಡಿರುವುದಕ್ಕೆ ದಿಲ್ಲಿಯ ಮುಖ್ಯ ಚುನಾವಣಾ ಅಧಿಕಾರಿ ರಣಬೀರ್ ಸಿಂಗ್ ಬಿಜೆಪಿಗೆ ನೋಟಿಸು ಜಾರಿ ಮಾಡಿದ್ದಾರೆ.

ಹೊಸದಿಲ್ಲಿಯ 7 ಲೋಕಸಭಾ ಕ್ಷೇತ್ರಗಳಲ್ಲಿ ಮೇ 12ರಂದು ಚುನಾವಣೆ ನಡೆಯಲಿದೆ.

  48 ಗಂಟೆಗಳ ‘ವೌನ ಅವಧಿ’ ಶುಕ್ರವಾರ ಸಂಜೆ 6 ಗಂಟೆಗೆ ಆರಂಭವಾಗಲಿದೆ ಹಾಗೂ ರವಿವಾರ ಸಂಜೆ 6 ಗಂಟೆಗೆ ಪೂರ್ಣಗೊಳ್ಳಲಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News