×
Ad

ಅಮೆಮಾರ್ : ಗೌಸಿಯಾ ಹುದಾ ಫೌಂಡೇಶನ್ ವತಿಯಿಂದ ರಮಝಾನ್ ಕಿಟ್ ವಿತರಣೆ

Update: 2019-05-12 13:07 IST

ಫರಂಗಿಪೇಟೆ, ಮೇ 12: ಗೌಸಿಯಾ ಹುದಾ ಫೌಂಡೇಶನ್ ಇದರ ಆಶ್ರಯದಲ್ಲಿ ಹದಿಮೂರನೇ ವಾರ್ಷಿಕೋತ್ಸವದ ಅಂಗವಾಗಿ ತರ್ಬೀಯತುಲ್ ರಿಫಾಯಿ ದಫ್ ಕಮಿಟಿ ಅಮೆಮಾರ್ ವತಿಯಿಂದ ನೂರು ಅರ್ಹ ಬಡ ಕುಟುಂಬಗಳಿಗೆ ರಮಝಾನ್ ಕಿಟ್ ವಿತರಣೆ ಕಾರ್ಯಕ್ರಮ ರವಿವಾರ ನಡೆಯಿತು.

ಇರ್ಶಾದ್ ದಾರಿಮಿ ಮಿತ್ತಬೈಲ್ ಸಭಾ ಕಾರ್ಯಕ್ರಮದ ಉದ್ಘಾಟನೆಗೈದರು. ತರ್ಬೀಯತುಲ್ ರಿಫಾಯಿ ದಫ್ ಕಮಿಟಿ ಅಧ್ಯಕ್ಷ ಅಕ್ತರ್ ಹುಸೈನ್ ಎಮ್ಎಮ್ ಅಧ್ಯಕ್ಷತೆ ವಹಿಸಿದರು.

ಬದ್ರಿಯಾ ಜುಮಾ ಮಸೀದಿ ಅಮೆಮಾರ್ ಖತೀಬ್ ಅಬೂಸ್ವಾಲಿಹ್ ಫೈಝಿ, ಮಸೀದಿ  ಅಧ್ಯಕ್ಷ ಉಮರಬ್ಬ ಎ.ಎಸ್.ಬಿ, ಅಮೆಮಾರ್ ಮದರಸ ಸದರ್ ಮುಅಲ್ಲಿಮ್ ಮೊಹಿದ್ದೀನ್ ಅಲ್ ಹಸನಿ ಈ ಸಂದರ್ಭ ಮಾತನಾಡಿದರು.

ಪುದು ಗ್ರಾಮ ಪಂ. ಸದಸ್ಯ ಅಬ್ದುಲ್ ರಝಾಕ್, ಅಮೆಮಾರ್ ಮದರಸ ಮುಅಲ್ಲಿಮ್ ಇಸ್ಮಾಯಿಲ್ ಯಮಾನಿ ತಿಂಗಳಾಡಿ ಅಬೂಬಕರ್ ಮದನಿ, ಮುಅಝ್ಝಿನ್ ಸುಲೈಮಾನ್ ಮುಸ್ಲಿಯಾರ್, ಮಾಜಿ ಪಂ ಸದಸ್ಯರಾದ  ಮೊಹಮ್ಮದ್ ಪೇರಿಮಾರ್, ಎಮ್.ಕೆ. ಮೊಹಮ್ಮದ್, ಆದಮ್, ಉಸ್ಮಾನ್,  ಎಸ್ಕೆಎಸ್.ಎಸ್ .ಎಫ್ ಅಮೆಮಾರ್ ಕ್ಲಸ್ಟರ್ ಕೋಶಾಧಿಕಾರಿ  ಬದ್ರುದ್ದೀನ್ ಉಪಸ್ಥಿತರಿದ್ದರು.

ಮರ್ಹೂಮ್ ಮಿತ್ತಬೈಲ್ ಜಬ್ಬಾರ್ ಉಸ್ತಾದ್, ಜಮಾಲುದ್ದೀನ್ ಫೈಝಿ, ಹಸೈನಾರ್ ಬಾಖವಿ, ಮೊಹಮ್ಮದ್ ಉಸ್ತಾದ್ ಸ್ಮರಣಾರ್ಥ ರಮಝಾನ್ ಗಿಫ್ಟ್ ಪುಸ್ತಕವನ್ನು ಎಸ್ಕೆಎಸ್ಎಸ್ಎಫ್ ಬಿಸಿರೋಡ್ ಕ್ಲಸ್ಟರ್ ಅಧ್ಯಕ್ಷ ಅಲ್ತಾಫ್ ಈ ಸಂದರ್ಭ ಬಿಡುಗಡೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News