ಪುತ್ತೂರು: ಕಾರ್ಮಿಕ ನಾಪತ್ತೆ
ಪುತ್ತೂರು: ಕೂಲಿ ಕೆಲಸಕ್ಕೆಂದು ಹೋಗಿದ್ದ ಕಾರ್ಮಿಕನೋರ್ವ ಮನೆಗೆ ಹಿಂದಿರುಗದೆ ಕಾಣೆಯಾಗಿರುವ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
ಪುತ್ತೂರು ತಾಲೂಕಿನ ನಿಡ್ಪಳ್ಳಿ ಗ್ರಾಮದ ನಿಡ್ಪಳ್ಳಿ ಚರ್ಚ್ ಕ್ವಾಟರ್ಸ್ ನಿವಾಸಿ ಡೆಲ್ಫಿನ್ ಲೂವಿಸ್ ಎಂಬವರ ಪುತ್ರ ವಾಲ್ಟರ್ ಲೂವಿಸ್(46) ನಾಪತ್ತೆಯಾದ ವ್ಯಕ್ತಿ.
ಕೂಲಿ ಕೆಲಸ ಮಾಡುತ್ತಿದ್ದ ಅವರು ಎಂದಿನಂತೆ ಮೇ10ರಂದು ಬೆಳಿಗ್ಗೆ 8 ಗಂಟೆಗೆ ಕೆಲಸಕ್ಕೆಂದು ಮನೆಯಿಂದ ಹೊರಟು ಹೋಗಿದವರು ಮತ್ತೆ ಹಿಂತಿರುಗಿ ಬಂದಿಲ್ಲ. ಅವರ ಬಗ್ಗೆ ಸಂಬಂಧಿಕರನ್ನು ದೂರವಾಣಿ ಮೂಲಕ ಸಂಪರ್ಕಿಸಿದರೂ ಯಾವುದೇ ಸುಳಿವು ದೊರೆತಿರುವುದಿಲ್ಲ. ಅಲ್ಲದೆ ಆವರ ಮೊಬೈಲ್ ಸ್ವಿಚ್ ಆಫ್ ಆಗಿದೆ. ಮನೆಯಿಂದ ಹೊಗುವ ಸಂದರ್ಭದಲ್ಲಿ ಬ್ಯಾಂಕ್ ಪಾಸ್‍ಪುಸ್ತವನ್ನು ಕೊಂಡುಹೋಗಿದ್ದಾರೆ. ವಾಲ್ಟರ್ ಲೂವಿಸ್ ಅವರು ಮನೆ ಕಟ್ಟಲು ಬ್ಯಾಂಕ್‍ನಿಂದ ಸಾಲ ಪಡೆದುಕೊಂಡಿದ್ದು ಸಾಲದ ಹೊರೆಯಿಂದ ಮನನೊಂದು ಮನೆ ಬಿಟ್ಟು ಹೋಗಿರಬಹುದು ಎಂದು ಮನೆ ಮಂದಿ ಸಂಶಯ ವ್ಯಕ್ತಪಡಿಸಿದ್ದಾರೆ.
ವಾಲ್ಟರ್ ಲೂವಿಸ್‍ರವರ ತಂದೆ ಡೆಲ್ಫಿನ್ ಲೂವಿಸ್‍ರವರು ನೀಡಿದ ದೂರಿನಂತೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.