×
Ad

ಮೋದಿ ದ್ವೇಷ ಬಳಸಿದರು, ನಾವು ಪ್ರೀತಿ ಬಳಸಿದೆವು: ರಾಹುಲ್ ಗಾಂಧಿ

Update: 2019-05-12 20:17 IST

ಹೊಸದಿಲ್ಲಿ, ಮೇ 12: ಏಳು ರಾಜ್ಯಗಳ 59 ಲೋಕಸಭಾ ಕ್ಷೇತ್ರಗಳಿಗೆ ರವಿವಾರ ನಡೆದ ಆರನೇ ಹಂತದ ಚುನಾವಣೆಯಲ್ಲಿ ಮತ ಚಲಾಯಿಸಿದ ಬಳಿಕ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ‘ಪ್ರೀತಿ ಗೆಲ್ಲಲಿದೆ’ ಎಂದು ಹೇಳಿದ್ದಾರೆ.

ನಿರುದ್ಯೋಗ, ಕೃಷಿ ಬಿಕ್ಕಟ್ಟು, ನೋಟು ನಿಷೇಧ, ರಫೇಲ್ ಮೊದಲಾದ ವಿಷಯಗಳನ್ನು ಮುಂದಿಟ್ಟುಕೊಂಡು ನಾವು ಚುನಾವಣೆ ಪ್ರಚಾರ ನಡೆಸಿದೆವು ಎಂದು ಅವರು ಹೇಳಿದರು.

ಚುನಾವಣಾ ಪ್ರಚಾರದಲ್ಲಿ ನರೇಂದ್ರ ಮೋದಿ ಅವರು ದ್ವೇಷವನ್ನು ಬಳಸಿದರು. ನಾವು ಪ್ರೀತಿ ಬಳಸಿದೆವು. ಪ್ರೀತಿ ಗೆಲ್ಲಲಿದೆ ಎಂಬ ಬಗ್ಗೆ ನನಗೆ ಭರವಸೆ ಇದೆ ಎಂದು ಅವರು ತಿಳಿಸಿದ್ದಾರೆ.

ಹೊಸದಿಲ್ಲಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಅಜಯ್ ಮಾಕೆನ್, ಬಿಜೆಪಿಯಿಂದ ಮೀನಾಕ್ಷಿ ಲೇಖಿ ಹಾಗೂ ಆಪ್‌ನಿಂದ ಬ್ರಿಜೇಶ್ ಗೋಯಲ್ ಸ್ಪರ್ಧಿಸುತ್ತಿದ್ದಾರೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News