ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನಿಂದ ತಾಯಂದಿರ ದಿನಾಚರಣೆ
Update: 2019-05-12 21:06 IST
ಮಂಗಳೂರು, ಮೇ 12: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ ವತಿಯಿಂದ ರವಿವಾರ ತಾಯಂದಿರ ದಿನವನ್ನು ಆಚರಿಸಲಾಯಿತು.
ಸಮಾರಂಭದ ಮುಖ್ಯ ಅತಿಥಿಯಾಗಿ ಡಾ. ಮೇಘ ಮೋಹನ್ ಮತ್ತು ಪುಷ್ಪಾ ಮೋಹನ್ ಆಗಮಿಸಿದ್ದರು. ಮಲಬಾರ್ ಗೋಲ್ಡ್‌ನ ಮಂಗಳೂರು ಮಳಿಗೆಯ ಮುಖ್ಯಸ್ಥ ಶರತ್ ಚಂದ್ರನ್ ಮತ್ತು ಮಾರ್ಕೆಟಿಂಗ್ ಮ್ಯಾನೇಜರ್ ಕಾರ್ತಿಕ ಕುಮಾರ್ ಉಪಸ್ಥಿತರಿದ್ದರು.
ತಾಯಂದಿರ ದಿನದ ಪ್ರಯುಕ್ತ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ವಿವಿಧ ವಿನ್ಯಾಸದ ಮೈನ್ ಡೈಮಂಡ್ ಆಭರಣಗಳನ್ನು ಅತಿಕಡಿಮೆ ಬೆಲೆಗೆ ನೀಡುತ್ತಿದೆ. ಮೈನ್ ಡೈಮಂಡ್ ಸಂಗ್ರಹದಲ್ಲಿ ದಿನಬಳಕೆಯ ಸ್ಟಡ್‌ಗಳು, ಬಳೆಗಳು, ಉಂಗುರ ಮತ್ತು ಪೆಂಡೆಂಟ್‌ಗಳು ಲಭ್ಯವಿದೆ.
ಪ್ರತಿ ಮೈನ್ ವಜ್ರಾಭರಣಕ್ಕೂ ಜಿಐಎ ಮತ್ತು ಐಜಿಎಯ ಗುಣಮಟ್ಟದ ಖಾತರಿ ಪ್ರಮಾಣಪತ್ರವನ್ನು ನೀಡಲಾಗುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ.