ಮೀನುಗಾರ ಕುಟುಂಬಕ್ಕೆ ಪರಿಹಾರ: ಕಾಂಗ್ರೆಸ್ ಕೃತಜ್ಞತೆ
Update: 2019-05-12 21:16 IST
ಉಡುಪಿ, ಮೇ 12: ದುರಂತಕ್ಕೀಡಾದ ಸುವರ್ಣ ತ್ರಿಭುಜ ಬೋಟ್ನಲ್ಲಿ ನಾಪತ್ತೆಯಾಗಿರುವ ಮೀನುಗಾರರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಘೋಷಿಸಿದ ರಾಜ್ಯ ಸರಕಾರಕ್ಕೆ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಕೃತಜ್ಞತೆ ಸಲ್ಲಿಸಿದೆ.
ಮೀನುಗಾರಿಕೆಗೆ ತೆರಳಿ ನಿಗೂಢವಾಗಿ ನಾಪತ್ತೆಯಾದ ಬೋಟ್ ಅವಶೇಷ ಗಳನ್ನು ನೌಕಪಡೆ ಪತ್ತೆ ಹಚ್ಚಿದರೂ ಏಳು ಮೀನುಗಾರರ ಸುಳಿವಿಲ್ಲದೆ ಕುಟುಂಬ ಸಂಕಷ್ಟದಲ್ಲಿದ್ದು, ಕೇಂದ್ರ ಸರಕಾರ ಮೀನುಗಾರರ ಕುಟುಂಬಕ್ಕೆ ಗರಿಷ್ಠ ಮಟ್ಟದ ಪರಿಹಾರವನ್ನು ಒದಗಿಸುವಂತೆ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕಾಂಗ್ರೆಸ್ ಮುಖಂಡರಾದ ಬಿ.ನರಸಿಂಹಮೂರ್ತಿ, ದಿನೇಶ್ ಪುತ್ರನ್, ಹರೀಶ್ ಕಿಣಿ, ದಿವಾಕರ್ ಕುಂದರ್, ಕಿಶನ್ ಹೆಗ್ಡೆ ಕೊಲ್ಕೆಬೈಲು, ಭಾಸ್ಕರ ರಾವ್ ಕಿದಿಯೂರು, ಸತೀಶ್ ಅಮೀನ್ ಪಡುಕರೆ, ರಮೇಶ್ ಕಾಂಚನ್, ಯತೀಶ್ ಕರ್ಕೆರ, ಅಬೀಬ್ ಅಲಿ, ಹರೀಶ್ ಶೆಟ್ಟಿ, ಸದಾಶಿವ ಕಟ್ಟಗುಡ್ಡೆ, ಜನಾರ್ದನ್ ಭಂಡಾರ್ಕಾರ್ ಆಗ್ರಹಿಸಿದ್ದಾರೆ.