ಕೊಲ್ಲೂರು ಯಾತ್ರಾರ್ಥಿ ಮೃತ್ಯು
Update: 2019-05-12 21:57 IST
ಕೊಲ್ಲೂರು, ಮೇ 12: ಕೊಲ್ಲೂರು ಶ್ರೀಮೂಕಾಂಬಿಕಾ ದೇವರ ದರ್ಶನಕ್ಕೆ ಬಂದಿದ್ದ ಕೇರಳದ ಯಾತ್ರಾರ್ಥಿಯೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ಮೇ 12ರಂದು ಬೆಳಗ್ಗೆ 7ಗಂಟೆ ಸುಮಾರಿಗೆ ನಡೆದಿದೆ.
ಮೃತರನ್ನು ಕೇರಳ ರಾಜ್ಯದ ಮಲಪುರಂ ನಿವಾಸಿ ಸುಬ್ರಹ್ಮಣ್ಯನ್ ಪಿ.ಸಿ(45) ಎಂದು ಗುರುತಿಸಲಾಗಿದೆ. ಇವರು ಕುಟುಂಬದವರೊಂದಿಗೆ ಕೊಲ್ಲೂರು ದೇವರ ದರ್ಶನಕ್ಕೆ ಬಂದಿದ್ದು, ದೇವರ ದರ್ಶನ ಮಾಡುತ್ತಿರುವ ವೇಳೆ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದರೆನ್ನಲಾಗಿದೆ.
ತೀವ್ರವಾಗಿ ಅಸ್ವಸ್ಥ ಗೊಂಡ ಅವರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು.
ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.