ಆರನೇ ಹಂತದ ಲೋಕಸಭಾ ಚುನಾವಣೆ: ಶೇ.63.3 ಮತದಾನ

Update: 2019-05-12 16:44 GMT

ಹೊಸದಿಲ್ಲಿ,ಮೇ.12: ಆರನೇ ಹಂತದ ಲೋಕಸಭಾ ಚುನಾವಣೆಗಾಗಿ ರವಿವಾರ ಏಳು ರಾಜ್ಯಗಳ 59 ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ಸರಾಸರಿ ಶೇ.63.3ರಷ್ಟು ಮತದಾನವಾಗಿದೆ.

ಉತ್ತರ ಪ್ರದೇಶದ 14,ಹರ್ಯಾಣದ 10,ದಿಲ್ಲಿಯ 7,ಜಾರ್ಖಂಡ್‌ನ 4 ಹಾಗೂ ಬಿಹಾರ,ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಳಗಳ ತಲಾ 8 ಕ್ಷೇತ್ರಗಳಲ್ಲಿ ಮತದಾನ ನಡೆಯಿತು.

ದಿಲ್ಲಿಯಲ್ಲಿ ಬಿಜೆಪಿ ಮತ್ತು ಆಪ್ ನಡುವೆ ಪ್ರಮುಖ ಸ್ಪರ್ಧೆಯೇರ್ಪಟ್ಟಿದ್ದು,ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್,ಕೇಂದ್ರ ಸಚಿವ ಹರ್ಷವರ್ಧನ,ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಮತ್ತು ಮಾಜಿ ಒಲಂಪಿಕ್ಸ್ ಬಾಕ್ಸರ್ ವಿಜೇಂದರ್ ಸಿಂಗ್ ಅವರು ಕಣದಲ್ಲಿರುವ ಪ್ರಮುಖರಲ್ಲಿ ಸೇರಿದ್ದಾರೆ.

ಪಶ್ಚಿಮ ಬಂಗಾಳದ ಮಿಡ್ನಾಪುರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಮಾಜಿ ಐಪಿಎಸ್ ಅಧಿಕಾರಿ ಭಾರತಿ ಘೋಷ್ ಮೇಲೆ ಹಲ್ಲೆ ನಡೆಸಿದ ತೃಣಮೂಲ ಕಾರ್ಯಕರ್ತರು ಅವರ ಕಾರಿಗೆ ಹಾನಿಯನ್ನುಂಟು ಮಾಡಿದ್ದಾರೆ. ಘೋಷ್ ಮತಗಟ್ಟೆಯಲ್ಲಿ ಚಿತ್ರಗಳನ್ನು ತೆಗೆಯುತ್ತಿದ್ದರೆಂದು ಚುನಾವಣಾ ಆಯೋಗವು ತಿಳಿಸಿದ್ದು,ಚುನಾವಣಾಧಿಕಾರಿಯನ್ನು ಎತ್ತಂಗಡಿಗೊಳಿಸಿದೆ. ಪುರುಲಿಯಾದ ಬಲರಾಮಪುದಲ್ಲಿ ಬಿಜೆಪಿ ಮತ್ತು ತೃಣಮೂಲ ಕಾರ್ಯಕರ್ತರ ನಡುವೆ ಘರ್ಷಣೆಗಳು ನಡೆದಿದ್ದು,ಭದ್ರತಾ ಪಡೆಗಳು ಗುಂಪನ್ನು ಚದುರಿಸಲು ಲಾಠಿಪ್ರಹಾರ ನಡೆಸಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News