ಕುಂದಗೋಳ: ಇಫ್ತಾರ್ ಕೂಟ ಏರ್ಪಡಿಸಿ, ನಮಾಝ್‌ಗೆ ಜಾಗ ಕೊಟ್ಟ ಲಿಂಗಾಯತರು
Update: 2019-05-12 22:23 IST
ಮಂಗಳೂರು/ಕುಂದಗೋಳ, ಮೇ 12: ಕುಂದಗೋಳದಲ್ಲಿ ಲಿಂಗಾಯತ ಕುಟುಂಬವೊಂದು ಮುಸ್ಲಿಮರಿಗೆ ಉಪವಾಸ ತೊರೆಯಲು ಇಫ್ತಾರ್ ಕೂಟ ಏರ್ಪಡಿಸಿದ್ದಲ್ಲದೆ, ನಮಾಝ್ ಮಾಡಲು ಅವಕಾಶ ಕಲ್ಪಿಸಿಕೊಟ್ಟ ಸೌಹಾರ್ದಕರ ಘಟನೆಯೊಂದು ರವಿವಾರ ಸಂಜೆ ನಡೆದಿದೆ.
ಕುಂದಗೋಳ ವಿಧಾನಸಭೆ ಉಪಚುನಾವಣೆಗೆ ಸಂಬಂಧಿಸಿದಂತೆ ಕುಂದಗೋಳದಲ್ಲಿ ಎಐಐಸಿಸಿ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ನೇತೃತ್ವದಲ್ಲಿ ಸಚಿವರು ಹಾಗೂ ಉಸ್ತುವಾರಿ ಸಚಿವರ ಮಹತ್ವದ ಸಭೆ ನಡೆಯಿತು. ಸಭೆ ಬಳಿಕ ಮುಸ್ಲಿಮರು ಉಪವಾಸ ತೊರೆಯುವ ಸಮಯವಾದ್ದರಿಂದ ಅಲ್ಲಿನ ಲಿಂಗಾಯತ ಕುಟುಂಬದ ಮುಖ್ಯಸ್ಥ ಹಾಗು ಸಾಮಾಜಿಕ ಕಾರ್ಯಕರ್ತರಾದ ಗಂಗಾಧರ್ ಕುನ್ನೂರು ಎಂಬವರು ಮುಸ್ಲಿಮರಿಗೆ ಇಫ್ತಾರ್ ಕೂಟಕ್ಕೆ ಆಹ್ವಾನಿಸಿದರು. ಬಳಿಕ ಮನೆಯಲ್ಲೇ ನಮಾಝ್ ಮಾಡಲು ಆ ಕುಟುಂಬ ವಿನಂತಿಸಿ, ಜಾಗವನ್ನು ನೀಡಿತು.
ಇಫ್ತಾರ್ ಕೂಟದಲ್ಲಿ ರಾಜ್ಯ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್, ನಝೀರ್ ಅಹ್ಮದ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.