ಮಂಗಳೂರಿನ ಸ್ಟೇಟ್ ಬ್ಯಾಂಕಿನ ಪಾರ್ಕ್‌ನಲ್ಲಿ ಕೊಲೆ ಪ್ರಕರಣ: ಆರೋಪಿಯ ಸೆರೆ
Update: 2019-05-13 15:16 IST
ಮಂಗಳೂರು, ಮೇ 13: ನಗರದ ಬಳ್ಳಾಲ್‌ಬಾಗ್ ಸಮೀಪದ ವಿವೇಕನಗರ ನಿವಾಸಿ ಶರತ್ (30) ಎಂಬಾತನನ್ನು ಕಳೆದ ವಾರ ಸ್ಟೇಟ್‌ಬ್ಯಾಂಕ್ ಬಳಿಯ ಪಾರ್ಕ್‌ವೊಂದರಲ್ಲಿ ಕಲ್ಲಿನಿಂದ ಜಜ್ಜಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಪಾಂಡೇಶ್ವರ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಕಟೀಲು ಸಮೀಪದ ಲಿಂಗಪ್ಪ (38) ಎಂದು ಗುರುತಿಸಲಾಗಿದೆ. ಆರೋಪಿಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಕುಡಿದ ಮತ್ತಿನಲ್ಲಿ ಆರೋಪಿಯು ಈ ಕೃತ್ಯ ಎಸಗಿದ್ದು, ಇದರಲ್ಲಿ ಇತರ ಕೆಲವರು ಶಾಮೀಲಾಗಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ.
ಮೇ 7ರ ರಾತ್ರಿ ಈ ಕೊಲೆ ನಡೆದಿದೆ. ಆರೋಪಿಗಳು ಕುಡಿದ ಮತ್ತಿನಲ್ಲಿ ಕಲ್ಲಿನಿಂದ ಜಜ್ಜಿ, ಹೆಂಚಿನಿಂದ ಹೊಡೆದು ಮುಖದ ಗುರುತು ಸಿಗದಂತೆ ಕೊಲೆಗೈದು ಸಿಮೆಂಟ್ ಸ್ಲ್ಯಾಬೊಂದನ್ನು ಮೃತದೇಹದ ಮೇಲೆ ಇರಿಸಿ ಪರಾರಿಯಾಗಿದ್ದರು. ಪಾಂಡೇಶ್ವರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.