ಉಡುಪಿ: ಗ್ರಾಪಂ ಉಪಚುನಾವಣೆಗೆ ಮೀಸಲಾತಿ ವಿವರ
ಉಡುಪಿ, ಮೇ 13: ವಿವಿಧ ಕಾರಣಗಳಿಂದ ತೆರವಾಗಿರುವ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿ ಗ್ರಾಪಂನ ಒಂದು ಸದಸ್ಯ ಸ್ಥಾನ, ತಲ್ಲೂರು ಗ್ರಾಪಂನ ಒಂದು ಸದಸ್ಯ ಸ್ಥಾನ, ಬ್ರಹ್ಮಾವರ ತಾಲೂಕಿನ ಕೋಟ ಗ್ರಾಪಂನ ಒಂದು ಸದಸ್ಯ ಸ್ಥಾನ, ಕಾಪು ತಾಲೂಕಿನ ಮುದರಂಗಡಿ ಗ್ರಾಪಂನ ಒಂದು ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಗ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ತಲ್ಲೂರು ಗ್ರಾಪಂನಲ್ಲಿ ತೆರವಾಗಿರುವ ಉಪ್ಪಿನಕುದ್ರು-1 ಕ್ಷೇತ್ರವನ್ನು ಹಿಂದುಳಿದ ವರ್ಗ ‘ಬ’ ಮಹಿಳೆಗೂ, ಹಾಲಾಡಿ ಗ್ರಾಪಂನ ಹಾಲಾಡಿ-1 ಕ್ಷೇತ್ರವನ್ನು ಅನುಸೂಚಿತ ಜಾತಿ ಮಹಿಳೆ, ಕೋಟ ಗ್ರಾಪಂನಲ್ಲಿ ತೆರವಾಗಿರುವ ಗಿಳಿಯಾರು ವಾರ್ಡ್-2 ಕ್ಷೇತ್ರವನ್ನುಸಾಮಾನ್ಯ ಮಹಿಳೆ ಹಾಗೂ ಮುದರಂಗಡಿ ಗ್ರಾಪಂನಲ್ಲಿ ತೆರವಾಗಿರುವ ಪಿಲಾರು-1 ಕ್ಷೇತ್ರವನ್ನು ಸಾಮಾನ್ಯ ಅ್ಯರ್ಥಿಗೂ ಮೀಸಲಾತಿ ನಿಗದಿಪಡಿಸಿ ಆಯೋಜ ಆದೇಶ ಹೊರಡಿಸಿದೆ.
ತಲ್ಲೂರು ಗ್ರಾಪಂನಲ್ಲಿ ತೆರವಾಗಿರುವ ಉಪ್ಪಿನಕುದ್ರು-1 ಕ್ಷೇತ್ರವನ್ನು ಹಿಂದುಳಿದ ವರ್ಗ ‘ಬ’ ಮಹಿಳೆಗೂ, ಹಾಲಾಡಿ ಗ್ರಾಪಂನ ಹಾಲಾಡಿ-1 ಕ್ಷೇತ್ರವನ್ನು ಅನುಸೂಚಿತ ಜಾತಿ ಮಹಿಳೆ, ಕೋಟ ಗ್ರಾಪಂನಲ್ಲಿ ತೆರವಾಗಿರುವ ಗಿಳಿಯಾರು ವಾರ್ಡ್-2 ಕ್ಷೇತ್ರವನ್ನುಸಾಮಾನ್ಯ ಮಹಿಳೆ ಹಾಗೂ ಮುದರಂಗಡಿ ಗ್ರಾಪಂನಲ್ಲಿ ತೆರವಾಗಿರುವ ಪಿಲಾರು-1 ಕ್ಷೇತ್ರವನ್ನು ಸಾಮಾನ್ಯ ಅ್ಯರ್ಥಿಗೂ ಮೀಸಲಾತಿ ನಿಗದಿಪಡಿಸಿ ಆಯೋಜ ಆದೇಶ ಹೊರಡಿಸಿದೆ. ಮೇ 13ರಿಂದ ಮೇ 16ರವರೆಗೆ ಬೆಳಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ ನಾಮಪತ್ರಗಳನ್ನು ಸಂಬಂಧಪಟ್ಟ ಗ್ರಾಪಂಗಳಲ್ಲಿರುವ ಚುನಾವಣಾಧಿಕಾರಿಗಳಿಗೆ ಸಲ್ಲಿಸಬಹುದು.
ಮೇ 13ರಿಂದ ಮೇ 16ರವರೆಗೆ ಬೆಳಗ್ಗೆ 11ರಿಂದ ಮ್ಯಾಹ್ನ3ರವರೆಗೆನಾಮಪತ್ರಗಳನ್ನುಸಂಬಂಪಟ್ಟ ಗ್ರಾಪಂಗಳಲ್ಲಿರುವ ಚುನಾವಣಾಧಿಕಾರಿಗಳಿಗೆ ಸಲ್ಲಿಸಬಹುದು. ನಾಮಪತ್ರಗಳನ್ನು ಸಲ್ಲಿಸಲು ಮೇ 16 ಕೊನೆಯ ದಿನವಾಗಿದೆ. ಮೇ 17 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಮೇ 20 ಕೊನೆಯ ದಿನವಾಗಿದೆ. ಮತದಾನ ಮೇ 29 ರಂದು ನಡೆಯಲಿದೆ. ಮತಗಳ ಎಣಿಕೆ ಮೇ 31ರಂದು ಬೆಳಗ್ಗೆ 8ರಿಂದ ಆಯಾ ತಾಲೂಕು ಕೇಂದ್ರ ಸ್ಥಳಗಳಲ್ಲಿ ನಡೆಯಲಿದೆ.
ಉಪ ಚುನಾವಣೆ ನಡೆಯಲಿರುವ ಗ್ರಾಪಂಗಳ ವ್ಯಾಪ್ತಿಯಲ್ಲಿ ಮೇ 13ರಿಂದ 31ರವರೆಗೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಉಪ ಚುನಾವಣೆ ನಡೆಯುವ ಎಲ್ಲಾ ಗ್ರಾಪಂಗಳಲ್ಲಿ ಮತ ಪೆಟ್ಟಿಗೆಗಳ ಮೂಲಕ ಚುನಾವಣೆಯನ್ನು ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.