ಅಪರಿಚಿತ ಮೃತ್ಯು: ವಾರಸುದಾರರಿಗೆ ಸೂಚನೆ
Update: 2019-05-13 20:03 IST
ಉಡುಪಿ, ಮೇ 13: ಬೈಂದೂರು ಪೊಲೀಸ್ ಠಾಣಾ ಸರಹದ್ದಿನ ನಾವುಂದ ಗ್ರಾಮದ ಬಾಂಗ್ ರೈಲ್ವೇ ಬ್ರಿಡ್ಜ್ ಬಳಿ ಮೇ 11ರಂದು ಅಪರಿಚಿತ ಗಂಡಸಿನ ಮೃತದೇಹ ಕಂಡುಬಂದಿದ್ದು, ಮೃತದೇಹದ ಕಾಲುಗಳೆರೆಡು ಮುರಿದ ಸ್ಥಿತಿಯಲ್ಲಿದ್ದು, ತಲೆ ಮತ್ತು ದೇಹಕ್ಕೆ ಗಾಯವಾಗಿದೆ.
ಮೃತ ವ್ಯಕ್ತಿಯ ಬಳಿ ಮಂಗಳೂರಿನಿಂದ ಕಾರವಾರಕ್ಕೆ ಹೋಗುವ ರೈಲ್ವೇ ಟಿಕೆಟ್ ಇದ್ದು, ಇವರು ಮಂಗಳೂರಿನಿಂದ ಕಾರವಾರಕ್ಕೆ ಹೋಗುವ ರೈಲಿನಿಂದ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿರುವ ಸಾಧ್ಯತೆ ಇದೆ.
ಮೃತ ವ್ಯಕ್ತಿ ಸುಮಾರು 65-75 ವರ್ಷ ಪ್ರಾಯದವರಾಗಿದ್ದು, ಮೃತರ ಗುರುತು ಪತ್ತೆಯಾಗಿಲ್ಲ. ಮೃತದೇಹವನ್ನು ಬೈಂದೂರು ಸಮುದಾಯ ಕೇಂದ್ರದ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಮೃತ ವ್ಯಕ್ತಿಯ ವಾರಸುದಾರರು ಯಾರಾದರೂ ಇದ್ದಲ್ಲಿ ಬೈಂದೂರು ಠಾಣಾ ದೂರವಾಣಿ ಸಂಖ್ಯೆ: 08254-251033, 9480805459ನ್ನು ಸಂಪರ್ಕಿಸುವಂತೆ ಬೈಂದೂರು ಪೊಲೀಸ್ ಠಾಣೆಯ ಪೊಲೀ್ ಉಪನಿರೀಕ್ಷಕರ ಪ್ರಕಟಣೆ ತಿಳಿಸಿದೆ.