ಅಸ್ಸಾಂ ಬಂಧನ ಶಿಬಿರದಲ್ಲಿದ್ದ ಶಂಕಾಸ್ಪದ ಮತದಾರ ಮಂಚದಿಂದ ಬಿದ್ದು ಸಾವು

Update: 2019-05-13 14:51 GMT

ತೇಜಪುರ,ಮೇ 13: ಅಸ್ಸಾಮಿನ ತೇಜಪುರ ಕೇಂದ್ರ ಕಾರಾಗೃಹದಲ್ಲಿನ ಬಂಧನ ಶಿಬಿರದಲ್ಲಿರಿಸಲಾಗಿದ್ದ ‘ಡಿ (ಶಂಕಾಸ್ಪದ)’ ಮತದಾರನೋರ್ವ ತನ್ನ ಮಂಚದಿಂದ ಕೆಳಕ್ಕೆ ಬಿದ್ದು ಸಾವನ್ನಪ್ಪಿದ್ದಾನೆ.

ಬಸುದೇವ ಬಿಸ್ವಾಷ್(58) ಮೃತ ವ್ಯಕ್ತಿ.

ಅಸ್ಸಾಮಿನಲ್ಲಿ ‘ಡಿ’ಮತದಾರ ಎಂದರೆ ಪೌರತ್ವದ ಸೂಕ್ತ ದಾಖಲೆಗಳ ಕೊರತೆಯಿಂದಾಗಿ ಸರಕಾರವು ಮತದಾನದ ಹಕ್ಕನ್ನು ಕಿತ್ತುಕೊಂಡಿರುವ ಮತದಾರರ ವರ್ಗವಾಗಿದೆ.

ಬಿಸ್ವಾಷ್‌ನನ್ನು 2016ರಿಂದಲೂ ಈ ಬಂಧನ ಶಿಬಿರಲ್ಲಿರಿಸಲಾಗಿದ್ದು,‘ಡಿ’ ಮತದಾರ ಸ್ಥಾನಮಾನಕ್ಕಾಗಿ ನಾಗಾಂವ್‌ನ ವಿದೇಶಿಯರ ನ್ಯಾಯಾಧಿಕರಣವು ಆತನ ವಿಚಾರಣೆ ನಡೆಸುತ್ತಿತ್ತು. ಅಸ್ತಮಾದಿಂದ ಬಳಲುತ್ತಿದ್ದ ಆತನಿಗೆ ಚಿಕಿತ್ಸೆ ಕೊಡಿಸಲಾಗುತ್ತಿತ್ತು ಎಂದು ಸೋನಿತಪುರ ಠಾಣಾಧಿಕಾರಿ ಕುಮಾರ ಸಂಜಿತ್ ಕೃಷ್ಣನ್ ತಿಳಿಸಿರು.

ವಿದೇಶಿಯರ ಕಾಯ್ದೆಯಡಿ ‘ಡಿ’ ಮತದಾರರನ್ನು ವಿಶೇಷ ನ್ಯಾಯಾಧಿಕರಣಗಳು ನಿರ್ಧರಿಸುತ್ತವೆ ಮತ್ತು ‘ಡಿ’ ಮತದಾರನೆಂದು ಘೋಷಿತ ವ್ಯಕ್ತಿಗೆ ಭಾವಚಿತ್ರಸಹಿತ ಮತದಾರರ ಗುರುತಿನ ಚೀಟಿಯನ್ನು ನೀಡಲಾಗುವುದಿಲ್ಲ.

‘ಡಿ’ ಮತದಾರರ ಪ್ರಕರಣಗಳನ್ನು ವಿದೇಶಿಯರ ನ್ಯಾಯಾಧಿಕರಣಗಳಿಗೆ ವರ್ಗಾಯಿಸಬೇಕು ಮತ್ತುಅವರನ್ನು ಬಂಧನ ಶಿಬಿರಗಳಲ್ಲಿರಿಸಬೇಕು ಎಂದು ಗುವಾಹಟಿ ಉಚ್ಚ ನ್ಯಾಯಾಲಯವು 2011ರಲ್ಲಿ ಆದೇಶಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News