ದತ್ತನಗರ ನಿವಾಸಿಗಳ ಸಂಘದ ವಾರ್ಷಿಕೋತ್ಸವ
ಶಕ್ತಿನಗರ, ಮೇ 12: ದತ್ತ ನಗರ ನಿವಾಸಿಗಳ ಸಂಘ ಮಂಗಳೂರು ಇದರ ವಾರ್ಷಿಕೋತ್ಸವ ಕಾರ್ಯಕ್ರಮವು ಶನಿವಾರ ದತ್ತನಗರ ಬಯಲು ರಂಗ ಮಂದಿರದಲ್ಲಿ ಜರುಗಿತು.
ಭಾರತೀಯ ಭೂ ಸೇನೆಯ ನಿವೃತ್ತ ಬ್ರಿಗೇಡಿಯರ್ ಐ.ಎನ್. ರೈ ಕಾರ್ಯಕ್ರಮ ಉದ್ಘಾಟಿಸಿ ಮಾಜಿ ಸೈನಿಕರನ್ನು ಗುರುತಿಸಿ ಸನ್ಮಾನಿಸಿರು ವುದು, ದೇಶ ಕಾಯುವ ವೀರ ಸೈನಿಕರಿಗೆ ನೀಡಿದ ಗೌರವವಾಗಿದೆ ಎಂದರು.
ಸಂಘದ ಅಧ್ಯಕ್ಷ ಪ್ರವೀಣ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ವೇದವ್ಯಾಸ ಕಾಮತ್, ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ, ಸ್ಥಾಪಕಾಧ್ಯಕ್ಷ ಎ.ಜೆ.ಶರ್ಮ ಮತ್ತಿತರರು ಉಪಸ್ಥಿತರಿದ್ದರು.
ಎಚ್.ಕೆ.ಪುರುಷೋತ್ತಮ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ರಾಜಗೋಪಾಲ್ ವಂದಿಸಿದರು. ಮಂಜುಳಾ ಶೆಟ್ಟಿ ಮತ್ತು ರಾಜೇಶ್ ಕಾರ್ಯಕ್ರಮ ನಿರೂಪಿಸಿದರು. ಕಿಶೋರ್ ಡಿ. ಶೆಟ್ಟಿ ನಿರ್ದೇಶನದ ‘ಮಂಗೆ ಮಲ್ಪೊಡ್ಚಿ’ ನಾಟಕ ಪ್ರದರ್ಶನಗೊಂಡಿತು.
ಕಾರ್ಯಕ್ರಮದಲ್ಲಿ ನಿವೃತ್ತ ಬ್ರಿಗೇಡಿಯರ್ ಐ.ಎನ್.ರೈ, ಶಾಸಕ ವೇದವ್ಯಾಸ ಕಾಮತ್, ನ್ಯಾಯವಾದಿ ನವೀನ್ ಬನ್ನಿಂತಾಯ,ನಿವೃತ್ತ ಸೈನ್ಯಾಧಿಕಾರಿಗಳಾದ ಬಾಲಕೃಷ್ಣ, ವಿಕ್ರಂ ದತ್ತ, ದೊಡ್ಡನಂಜನಗೌಡ, ಡಾ.ಗೌತಮ್ ಶೆಟ್ಟಿ, ಪೊಲೀಸ್ ಅಧಿಕಾರಿ ವಿನೋದ್, ಕಲಾವಿದ ಕಿಶೋರ್ ಡಿ.ಶೆಟ್ಟಿ, ರಿಯಾಲಿಟಿ ಶೋ ಖ್ಯಾತಿಯ ಚಿತ್ರಾಲಿ,ಪಾಲಿಕೆ ನೀರು ಸರಬರಾಜು ವಿಭಾಗದ ಚಂದ್ರಶೇಖರ್,ಎಸೆಸ್ಸೆಲ್ಸಿಯಲ್ಲಿ ಉತ್ತಮ ಸಾಧನೆಗೈದ ಯುಕ್ತಿ ತಲಿಂಜ, ಸಮೀಕ್ಷಾ ಎಂ, ದೇವಯಾನಿ, ಪಿಯುಸಿ ವಿಭಾಗದಲ್ಲಿ ಚೈತ್ರ,ಅಂಜೆಲಿಕ ಸೆರೆನಾ ರೆಜಿ, ಪೃಥ್ವಿ ಸಿ.ಎಸ್. ಅವರನ್ನು ಸನ್ಮಾನಿಸಲಾಯಿತು.