×
Ad

ಶುಶ್ರೂಷಣಾಧಿಕಾರಿ ಹುದ್ದೆಗೆ ನೇರ ಸಂದರ್ಶನ

Update: 2019-05-13 21:04 IST

ಮಂಗಳೂರು, ಮೇ 13: ಸುರತ್ಕಲ್‌ನಲ್ಲಿರುವ ದ.ಕ. ಜಿಲ್ಲಾ ತರಬೇತಿ ಕೇಂದ್ರಕ್ಕೆ 2019-20ನೇ ಸಾಲಿಗೆ ಶುಶ್ರೂಷಣಾಧಿಕಾರಿ ಹುದ್ದೆಯನ್ನು ಗುತ್ತಿಗೆ ಆಧಾರದಲ್ಲಿ ತಾತ್ಕಾಲಿಕ ನೆಲೆಯಲ್ಲಿ ನೇಮಿಸಿಕೊಳ್ಳಲು ಮೇ 18ರಂದು ನೇರ ಸಂದರ್ಶನ ನಡೆಯಲಿದೆ.

ಶುಶ್ರೂಷಣಾಧಿಕಾರಿ (ಗುತ್ತಿಗೆ) ಹಿರಿಯ ಆರೋಗ್ಯ ಸಹಾಯಕಿ, ಜನರಲ್ ನರ್ಸಿಂಗ್, ಡಿಪಿಎಚ್‌ಎನ್ ತರಬೇತಿ ಹೊಂದಿದವರಿಗೆ ಆದ್ಯತೆ ನೀಡಲಾಗುವುದು. ತರಬೇತಿ ಬಗ್ಗೆ ಟಿಒಟಿ ಹೊಂದಿದ ದಾಖಲೆಗಳನ್ನು ಲಗತ್ತೀಕರಿಸುವುದು.

ಬಿಎಸ್ಸಿ ನರ್ಸಿಂಗ್ ಪದವಿ ಹೊಂದಿರಬೇಕು, ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿರುವ ಹಾಗೂ ಪ್ರತ್ಯೇಕವಾಗಿ ತರಬೇತಿ ನೀಡಿದ ಅನುಭವ ಇರಬೇಕು. ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದವರಿಗೆ ಆದ್ಯತೆ ನೀಡಲಾಗುವುದು. ಈ ತರಬೇತಿ ಕೇಂದ್ರಕ್ಕೆ ಸಂಬಂಧಪಟ್ಟಂತೆ ತರಬೇತಿಗಳಲ್ಲಿ ಬೋಧನಾ ಅನುಭವ ಹಾಗೂ ಪಡೆದ ಇನ್ನಿತರ ತರಬೇತಿಗಳ ಅನುಭವದ ಆಧಾರದಲ್ಲಿ ಪ್ರಾಧಾನ್ಯತೆ ನೀಡಲಾಗುವುದು.

ಹುದ್ದೆಯು ತಾತ್ಕಾಲಿಕವಾಗಿದ್ದು, 31/03/2020 ಅಥವಾ ಖಾಯಂ ಹುದ್ದೆ ಭರ್ತಿಯಾಗುವ ವರೆಗೆ ಚಾಲ್ತಿಯಲ್ಲಿರುತ್ತದೆ. ವೇತನ ಶ್ರೇಣಿ ಮಾಸಿಕ 16,538 ರೂ., ವಯೋಮಿತಿ 67 ವರ್ಷ ಒಳಗಿರಬೇಕು.

ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರ ಕಚೇರಿ, ಜಿಲ್ಲಾ ತರಬೇತಿ ಕೇಂದ್ರ, ಸುರತ್ಕಲ್ ಕಚೇರಿಯ ದೂ.ಸಂ.: 0824- 2478930ನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News