×
Ad

ಮುದ್ರಾಡಿ: ಶೆಟ್ಟಿಗಾರ್ ಸಮಾಜ ಸೇವಾ ಸಂಘದ ಸಮಾವೇಶ

Update: 2019-05-13 22:00 IST

ಹೆಬ್ರಿ, ಮೇ 13: 21ನೇ ಶತಮಾನದಲ್ಲಿ ನಮ್ಮನ್ನು ಬಾಧಿಸುತ್ತಿರುವ ಅತಿ ದೊಡ್ಡ ಖಾಯಿಲೆ ಎಂದರೆ ಉದಾಸೀನತೆ. ಅದಕ್ಕೆ ಮದ್ದಿಲ್ಲ. ಉದಾಸೀನತೆಯನ್ನು ಹೋಗಲಾಡಿಸಿ ಕ್ರೀಯಾಶೀಲರಾಗಿದ್ದರೆ ದೇಹಕ್ಕೆ ಯಾವುದೇ ಖಾಯಿಲೆ ಬರದಂತೆ ಆರೋಗ್ಯವಾಗಿರಲು ಸಾಧ್ಯವಿದೆ ಎಂದು ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯ ಜನರಲ್ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ. ನಾಗರಾಜ ಮೂರ್ತಿ ಬ್ರಹ್ಮಾವರ ಹೇಳಿದ್ದಾರೆ.

ರವಿವಾರ ಮುದ್ರಾಡಿ ಶೆಟ್ಟಿಗಾರ್ ಸಮಾಜ ಸೇವಾ ಸಂಘ, ಶೆಟ್ಟಿಗಾರ್ ಮಹಿಳಾ ವೇದಿಕೆ ಮತ್ತು ಯುವ ವೇದಿಕೆಯ ಸಹಯೋಗದಲ್ಲಿ ಮುದ್ರಾಡಿಯ ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಭಾಭವನದಲ್ಲಿ ನಡೆದ ತೃತೀಯ ವಾರ್ಷಿಕ ಸಮಾವೇಶ, ಮಹಾಸಭೆ ಹಾಗೂ ಸಾಮೂಹಿಕ ಸತ್ಯನಾರಾಯಣ ಪೂಜೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಸಮಾಜದ ಕಟ್ಟ ಕಡೆಯ ವ್ಯಕ್ಯಿಯನ್ನೂ ಗುರುತಿಸುವ ಕೆಲಸ ಸಂಘಟನೆಗಳ ಮೂಲಕ ನಡೆಯಬೇಕು. ಇದರಿಂದ ವ್ಯಕ್ತಿಗಳ ಪರಿಚಯ ಹಾಗೂ ಪ್ರತಿಭೆಗಳ ಪರಿಚಯವಾಗುತ್ತದೆ ಎಂದವರು ನುಡಿದರು. ಮುದ್ರಾಡಿ ಶೆಟ್ಟಿಗಾರ್ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಸಾಹಿತಿ ಅಂಬಾತನಯ ಮುದ್ರಾಡಿ ಧಾರ್ಮಿಕ ಉಪನ್ಯಾಸ ನೀಡಿದರು.

ನಾಟಿ ವೈದ್ಯ ಶೀನ ಶೆಟ್ಟಿಗಾರ್ ಕೆಲಕಿಲ, ಮಾಜಿ ಸೈನಿಕ ಮುದ್ರಾಡಿ ವಿಠ್ಠಲ ಶೆಟ್ಟಿಗಾರ್, ರಾಜ್ಯ ಮಟ್ಟದ ಕ್ರೀಡಾಪಟು ಪುಣ್ಯಶ್ರೀ ಮುನಿಯಾಲ್, ಮಮತಾ ರಾಜೇಶ್ ಮುದ್ರಾಡಿ, ಅಂತಾರಾಷ್ಟ್ರೀಯ ಶಾಲಾ ಪ್ರಾಯೋಜಿತ ಕಾರ್ಯ ವಿಜೇತೆ ಅದಿತಿ ಮುದ್ರಾಡಿ ಅವರನ್ನು ಸನ್ಮಾನಿಸಲಾಯಿತು. ಪ್ರತಿಭಾ ಪುರಸ್ಕಾರ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು ಸಾಂಸ್ಕೃತಿಕ ಸಂಭ್ರಮ ನಡೆಯಿತು.

ಶೆಟ್ಟಿಗಾರ್ ಸಮಾಜ ಸೇವಾ ಸಂಘದ ಅಧ್ಯಕ್ಷ ಎಸ್.ಟಿ.ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿದ್ದರು. ಹೆಬ್ರಿ ಗ್ರಾಪಂ ಅಧ್ಯಕ್ಷ ಎಚ್.ಕೆ.ಸುಧಾಕರ್, ಅಧಿಕಾರಿ ಗಿರೀಶ್ ಶೆಟ್ಟಿಗಾರ್, ಮಹಿಳಾ ವೇದಿಕೆ ಅಧ್ಯಕ್ಷೆ ಶ್ರೀಮುದ್ರಾಡಿ, ಯುವ ವೇದಿಕೆಯ ಅಧ್ಯಕ್ಷ ಲೋಕೇಶ ಶೆಟ್ಟಿಗಾರ, ಕಬ್ಬಿನಾಲೆ ನಾಗರಾಜ ಶೆಟ್ಟಿಗಾರ್, ಸನತ ಕುಮಾರ್ ಮುದ್ರಾಡಿ, ಚಂದ್ರಶೇಖರ ಶೆಟ್ಟಿ ಮುನಿಯಾಲು, ಕುಚ್ಚೂರು ಮಾಲತಿ ತಿಮ್ಮಪ್ಪ ಶೆಟ್ಟಿಗಾರ್, ಶಕುಂತಳಾ ಶೆಟ್ಟಿಗಾರ್ ಮುದ್ರಾಡಿ, ವಿಠ್ಠಲ ಶೆಟ್ಟಿಗಾರ್ ಮುನಿಯಾಲು ಮತ್ತಿತರರು ಉಪಸ್ಥಿತರಿದ್ದರು.

ಪ್ರಮೀಳಾ ಜೆ.ಶೆಟ್ಟಿಗಾರ್ ವರದಿ ಮಂಡಿಸಿದರೆ, ಸದಾಶಿವ ಶೆಟ್ಟಿಗಾರ್ ಲೆಕ್ಕಪತ್ರ ಮಂಡಿಸಿದರು. ಶಿಕ್ಷಕಿ ಜಯಶ್ರೀ ಶೆಟ್ಟಿಗಾರ್ ಮತುತಿ ನರೇಂದ್ರ ಕಬ್ಬಿನಾಲೆ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News