ಅಧಿಕ ದರ ವಸೂಲಿ ಆರೋಪ: ದ.ಕ. ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರನ್ನು ಭೇಯಾದ ಎಸ್ಡಿಎಸಿಯು ನಿಯೋಗ
Update: 2019-05-13 22:15 IST
ಮಂಗಳೂರು : ಪರಿಷ್ಕೃತ ದರಕ್ಕಿಂತ ಅಧಿಕ ದರ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪದಲ್ಲಿ ಮಂಗಳೂರಿನ ಬಲ್ಮಟದ ಎಲ್ಪಿಜಿ ಪಂಪ್ ವಿರುದ್ಧ ಜಿಲ್ಲಾಧಿಕಾರಿ ಮತ್ತು ಪೋಲಿಸ್ ಆಯುಕ್ತರನ್ನು ಭೇಟಿ ಮಾಡಿ ದೂರು ನೀಡಿದ ಎಸ್ಡಿಎಸಿಯು (ಆಟೋ ಯೂನಿಯನ್) ಮಂಗಳೂರು ನಗರ ಸಮಿತಿ ನಿಯೋಗ ಬಲ್ಮಟ ಎಲ್ಪಿಜಿ ಪಂಪ್ ವ್ಯವಸ್ಥಾಪಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಮನವಿ ಮಾಡಿದೆ.
ಎಸ್ಡಿಎಸಿಯು ಜಲ್ಲಾಧ್ಯಕ್ಷ ಅಬ್ದುಲ್ ಖಾದರ್, ಕಾರ್ಯದರ್ಶಿ ಮುಸ್ತಫಾ ಪರ್ಲಿಯಾ, ಉಪಾಧ್ಯಕ್ಷ ಹಕೀಮ್ ಕಾನ, ಮಂಗಳೂರು ನಗರ ಸಮಿತಿ ಅಧ್ಯಕ್ಷ ಮಜೀದ್, ಕಾರ್ಯದರ್ಶಿ ಸಿದ್ದೀಕ್ ಕನ್ನಂಗಾರ್, ಜೊತೆ ಕಾರ್ಯದರ್ಶಿ ಹಸನ್ ಮರಕಡ, ಲತೀಫ್ ಕುಪ್ಪೆಪದವವು, ನಾಸಿರ್ ಉಳಾಯಿಬೆಟ್ಟು, ಬದ್ರುದ್ದೀನ್ ತುಂಬೆ, ಕಾದರ್ ಕುಪ್ಪೆಪದವು, ಅಕ್ಬರ್ ಕುಪ್ಪೆಪದವು, ಶರೀಫ್ ಕುತ್ತಾರ್ ಮತ್ತಿತರರು ನಿಯೋಗದಲ್ಲಿದ್ದರು.