ಗ್ರಾಪಂ ಚುನಾವಣೆಗೆ ಸಜ್ಜಾಗಲು ವಿನಯ್ ಕುಮಾರ್ ಸೊರಕೆ ಕರೆ
ಕಾಪು: ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪಕ್ಷದ ಎಲ್ಲ ಅಭ್ಯರ್ಥಿಗಳನ್ನು ಗೆಲ್ಲಿಸುವ ನಿಟ್ಟಿನಲ್ಲಿ ಈಗಿನಿಂದಲೇ ಕಾರ್ಯ ಪ್ರವೃತ್ತರಾಗಬೇಕು ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಕರೆ ನೀಡಿದರು.
ಶನಿವಾರ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ (ದಕ್ಷಿಣ)ಯ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಲೋಕಸಭಾ ಚುನಾವಣೆಯಲ್ಲಿ ದುಡಿದ ಪಕ್ಷದ ಕಾರ್ಯಕರ್ತರಿಗೆ ಅಭಿನಂದನೆಯನ್ನು ಸಲ್ಲಿಸಿದ ಅವರು, ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರುವುದು ಖಚಿತ. ರಾಹುಲ್-ಪ್ರಿಯಾಂಕ ಅಲೆಯೆದುರು ಮೋದಿ ಅಲೆ ಇನ್ನಿಲ್ಲದಂತೆ ಮಂಕಾಗಿ ಹೋಗಿದೆ ಎಂದರು.
ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‍ಚಂದ್ರ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರ್, ಉಪಾಧ್ಯಕ್ಷ ಕಾಪು ದಿವಾಕರ್ ಶೆಟ್ಟಿ, ಪಕ್ಷದ ಮುಖಂಡರಾದ ಸರಸು ಬಂಗೇರ, ಲೀನ ಮಥಾಯಸ್, ದೇವಪುತ್ರ ಕೋಟ್ಯಾನ್, ಗೋಪಾಲ್ ಪೂಜಾರಿ, ವಿಶ್ವಾಸ್ ಅಮೀನ್, ಮೇಲ್ವಿನ್ ಡಿ ಸೋಜ, ಗಣೇಶ್ ಕೋಟ್ಯಾನ್, ಫಾರೂಕ್ ಚಂದ್ರನಗರ, ಎಚ್. ಅಬ್ದುಲ್ಲಾ, ಪ್ರಭಾ ಶೆಟ್ಟಿ, ಪ್ರಭಾವತಿ ಸಾಲಿಯಾನ್, ಕೆ. ಎಚ್.ಉಸ್ಮಾನ್, ಅಬ್ದುಲ್ ರಹಿಮಾನ್ ಕನ್ನಂಗರ್, ಹರೀಶ್ ನಾಯಕ್, ನಾಗೇಶ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಅಮೀರ್ ಮೊಹಮ್ಮದ್ ಕಾಪು ಸ್ವಾಗತಿಸಿದರು. ದಿನೇಶ್ ಕೋಟ್ಯಾನ್ ವಂದಿಸಿದರು.