ಕ.ರಾ.ಮು.ವಿ.ವಿ.ಸ್ನಾತಕೋತ್ತರ ಪದವಿ, ಡಿಪ್ಲೊಮಾಗಳಿಗೆ ಉತ್ತಮ ಪ್ರತಿಕ್ರೀಯೆ-ಪ್ರೊ.ಶಿವಲಿಂಗಯ್ಯ
ಮಂಗಳೂರು, ಮೇ13: ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯ 2017ರ ನಿಯಮಾವಳಿ ಪ್ರಕಾರ ಮಾನ್ಯತೆ ದೊರಕಿರುತ್ತದೆ. ಪ್ರಸ್ತುತ 31ಗೃಹ ತಾಂತ್ರಿಕೇತರ ಕಾರ್ಯಕ್ರಮಗಳನ್ನು ಪ್ರಾರಂಭಿಸಲು ಅನುಮೋದನೆ ದೊರಕಿರುತ್ತದೆ ಎಂದು ಕುಲಪತಿ ಪ್ರೊ.ಶಿವಲಿಂಗಯ್ಯ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
2018ರ ಜುಲೈ ಆವೃತ್ತಿಯಲ್ಲಿ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಿದ್ದು ಈಗಾಗಲೇ 12 ಸಾವಿರ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. 2019ರ ಜನವರಿ ಆವೃತ್ತಿಯಲ್ಲಿ ಬಿಎಡ್ ಮತ್ತು ಎಂಬಿಎ ಕಾರ್ಯಕ್ರಮಗಳಿಗೆ ವಿದ್ಯಾರ್ಥಿಗಳಿಗೆ ಪ್ರವೇಶಕ್ಕೆ ಅರ್ಜಿ ಆಹ್ವಾನಿ ಪ್ರವೇಶಾತಿಯನ್ನು ಮಾಡಿಕೊಳ್ಳಲಾಗಿದ್ದು ಸಬಂಧಿಸಿದಂತೆ ಅಂಕಿ ಅಂಶಗಳನ್ನು ವಿಶ್ವ ವಿದ್ಯಾನಿಲಯ ಧನ ಸಹಯೋಗ ಆಯೋಗಕ್ಕೆ ಸಲ್ಲಿಸಲಾಗಿದೆ.
ಎಂಬಿಎ ಕಾರ್ಯಕ್ರಮಗಳಿಗೆ ಮನವಿ ಬಿಎ/ಬಿ.ಕಾಂ/ಎಂ.ಎ/ಎಂ.ಕಾಂ/ಎಂ.ಸ್ಸಿ/ ಬಿ.ಲಿಬ್. ಐ.ಎಸ್ಸಿ/ಎಂ.ಲಿಬ್.ಐ.ಎಸ್ಸಿ/ಡಿಪ್ಲೋಮಾ /ಪಿ.ಜಿ.ಡಿಪ್ಲೋಮಾ ಸರ್ಟಿಫಿಕೇಟ್ ಕೋರ್ಸ್‌ಗಳಿಗೆ ಮೇ 5ರಂದು ಪ್ರವೇಶಾತಿ ಆರಂಭವಾಗಿದೆ.ದಂಡ ಶುಲ್ಕವಿಲ್ಲದೆ ಪ್ರವೇಶಾತಿ ಪಡೆಯಲು ಜುಲೈ 25,ರೂ.200 ದಂಡ ಶುಲ್ಕದೊಂದಿಗೆ ಆಗಸ್ಟ್ 21,2019 ಮತ್ತು ರೂ 400 ದಂಡ ಶುಲ್ಕದೊಂದಿಗೆ ಆಗಸ್ಟ್ 31,2019 ಕೊನೆಯ ದಿನಾಂಕವಾಗಿರುತ್ತದೆ. ಎಂಬಿಎ ಕೋರ್ಸ್‌ಗೆ ಅರ್ಜಿ ಸಲ್ಲಿಸಲು ಜುಲೈ 20,ಸಾಮಾನ್ಯ ಪ್ರವೇಶ ಪರೀಕ್ಷೆ 28 ಹಾಗೂ ಸಾಮಾನ್ಯ ಪ್ರವೇಶ ಪರೀಕ್ಷೆ ಫಲಿತಾಂಶ ಜುಲೈ 3 ಮತ್ತು ಪ್ರವೇಶಾತಿಯ ಕೊನೆಯ ದಿನಾಂಕ ಜುಲೈ 31,2019 ಅಂತಿಮ ದಿನಾಂಕವಾಗಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿತಿ www.ksoumysore.karnataka.gov.in ಮೂಲಕ ಪಡೆಯಬಹುದಾಗಿದೆ ಎಂದು ಕುಲಪತಿ ಶಿವಲಿಂಗಯ್ಯ ತಿಳಿಸಿದ್ದಾರೆ.
ಮಂಗಳೂರು ನಗರದ ಲೇಡಿಹಿಲ್ ಮುಖ್ಯ ರಸ್ತೆಯ ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ಮೂರನೆ ಮಹಡಿಯಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ ಪ್ರಾದೇಶಿಕ ಕೇಂದ್ರವಿದೆ ಎಂದರು. ನಗರದ ಡಾ.ದಯಾನಂದ ಪಿ.ಪೈ -ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿ ಮಂಗಳೂರು,ಸಂತ ಫಿಲೋಮಿನಾ ಕಾಲೇಜು ಪುತ್ತೂರು, ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ವಿಟ್ಲ ಸೇರಿದಂತೆ ಕಲಿಕಾ ಸಹಾಯ ಕೇಂದ್ರಗಳನ್ನು ಸಂಸ್ಥೆ ಹೊಂದಿದೆ ಎಂದು ಶಿವಲಿಂಗಯ್ಯ ತಿಳಿಸಿದ್ದಾರೆ.
ವಿದ್ಯಾರ್ಥಿಗಳು ತಮ್ಮ ಸಹಾಯಕ್ಕಾಗಿ ದೂರವಾಣಿ ಸಂಖ್ಯೆ 0824-2510953, 9686215043, 9448066788, 9480326709, 9480477505,9880983081 ಮತ್ತು ವೆಬ್ ಸೈಟ್ online@ksoumysuru.ac.in ಮೂಲಕ ಮಾಹಿತಿ ಪಡೆದುಕೊಳ್ಳಬಹುದು ಎಂದು ಶಿವಲಿಂಗಯ್ಯ ತಿಳಿಸಿದ್ದಾರೆ.
ಕೆಎಸ್‌ಒಯು ಪ್ರಕರಣ ಶೀಘ್ರದಲ್ಲಿ ಇತ್ಯರ್ಥ :- 2013-14 ಮತ್ತು 2014-15ನೆ ಸಾಲಿನಲ್ಲಿ ಕೆಎಸ್‌ಒಯು ಮೂಲಕ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಪದವಿ ಮಾನ್ಯತೆಯ ಸಮಸ್ಯೆಯ ಬಗ್ಗೆ ನ್ಯಾಯಾಲಯದಲ್ಲಿ ಇರುವ ಪ್ರಕರಣಗಳು ಶೀಘ್ರದಲ್ಲಿ ಇತ್ಯರ್ಥಗೊಳ್ಳಲಿದೆ.ಯುಜಿಸಿ ನಿಯಮಾವಳಿಗಳನ್ನು ಪಾಲಿಸಿರುವುದರಿಂದ ಇಲ್ಲಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗದು ಎನ್ನುವ ಆಶಾಭಾವನೆಯನ್ನು ವಿಶ್ವ ವಿದ್ಯಾನಿಲಯ ಹೊಂದಿರುವುದಾಗಿ ಕುಲಪತಿ ಶಿವಲಿಂಗಯ್ಯ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಂಗಳೂರು ಪ್ರಾದೇಶಿಕ ಕೇಂದ್ರದ ನಿರ್ದೇಶಕ ಡಾ.ಬಸವರಾಜು ,ಕಲಿಕಾ ಸಹಾಯ ಕೇಂದ್ರ ಸಂಚಾಲಕ ಮಂಗಳೂರು ಡಾ.ದಯಾನಂದ ಪಿ.ಪೈ -ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿ ಇದರ ಪ್ರಾಂಶುಪಾಲ ಡಾ.ರಾಜಶೇಖರ ಹೆಬ್ಬಾರ್,ಸಂತ ಫಿಲೋಮಿನಾ ಕಾಲೇಜು ಪುತ್ತೂರು ಇದರ ಸಂಚಾಲಕ ಡಾ.ರಾಧಾಕೃಷ್ಣ ಗೌಡ ಮೊದಲಾದವರು ಉಪಸ್ಥಿತರಿದ್ದರು.