ಪುರಸಭಾ ಚುನಾವಣೆ :ಮೂಡುಬಿದಿರೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಅಂತಿಮ

Update: 2019-05-13 17:08 GMT

ಮೂಡುಬಿದಿರೆ: ಇಲ್ಲಿನ ಪುರಸಭೆಗೆ ಮೇ 29ರಂದು ನಡೆಯುವ ಚುನಾವಣೆಗೆ  ಪಕ್ಷವು ಬಿಜೆಪಿ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಿದ್ದು ಸೋಮವಾರ ಬಿಜೆಪಿ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಂಡಲ ಅಧ್ಯಕ್ಷ ಈಶ್ವರ್ ಕಟೀಲು ಪಕ್ಷದ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಬಿಡುಗಡೆಗೊಳಿಸಿದರು.

ಕ್ಷೇತ್ರವಾರು ಅಭ್ಯರ್ಥಿಗಳ ವಿವರ ಇಂತಿವೆ. ಮಾರ್ಪಾಡಿ ವಾರ್ಡ್ 1ಕ್ಕೆ ಆಶಾಲತಾ, ವಾರ್ಡ್2 ಸುಭಾಸ್‍ನಗರಕ್ಕೆ ಗೋಪಾಲ ಶೆಟ್ಟಿಗಾರ್, ವಾರ್ಡ್ 3 ಅಲಂಗಾರಿಗೆ ಭರತ್ ಡಿ. ಶೆಟ್ಟಿ, ವಾರ್ಡ್ 4 ಅಲಂಗಾರಿಗೆ ಸೌಮ್ಯ ಶೆಟ್ಟಿ, ವಾರ್ಡ್ 5 ಒಂಟಿಕಟ್ಟೆಗೆ ನಾಗರಾಜ ಪೂಜಾರಿ, ವಾರ್ಡ್ 6 ಗಾಂಧಿನಗರಕ್ಕೆ ದಿವ್ಯ ಜಗದೀಶ್, ವಾರ್ಡ್ 7 ಸ್ವರಾಜ್ಯಮೈದಾನಕ್ಕೆ ರಾಜೇಶ್ ನಾಯ್ಕ್, ವಾರ್ಡ್ 8 ಅರಮನೆ ಬಾಗಿಲಿಗೆ ನೀತಾ, ವಾರ್ಡ್ 9 ಜೈನ್ ಪೇಟೆಗೆ ಶ್ವೇತಾ ಕುಮಾರಿ ಹೆಚ್.ಎಸ್, ವಾರ್ಡ್ 10 ಕೋಟೆಬಾಗಿಲಿಗೆ ಹನೀಫ್, ವಾರ್ಡ್ 11 ಚಾಮುಂಡಿಬೆಟ್ಟಕ್ಕೆ ನವೀನ್ ಶೆಟ್ಟಿ, ವಾರ್ಡ್12 ಡೊಡ್ಮನೆ ರಸ್ತೆಗೆ ಸ್ವಾತಿ ಪ್ರಭು, ವಾರ್ಡ್ 13 ರೇಂಜರ್ ಫಾರೆಸ್ಟ್ ಆಫೀಸ್ ಪ್ರದೇಶಕ್ಕೆ ರಾಜೇಶ್ ಮಲ್ಯ, 14ನೇ ವಾರ್ಡ್ ಮಾಸ್ತಿಕಟ್ಟೆಗೆ ಪ್ರಸಾಸ್ ಕುಮಾರ್, 15ನೇ ವಾರ್ಡ್ ಕೊಡಂಗಲ್ಲಿಗೆ ಸವಿತಾ ವಿಜಯ, 16ನೇ ವಾರ್ಡ್ ವಿಶಾಲ್‍ನಗರಕ್ಕೆ ಸೋಮೇಶ್, 17ನೇ ವಾರ್ಡ್ ಲಾಡಿಗೆ ಶರತ್ ಭಂಡಾರಿ, 18ನೇ ವಾರ್ಡ್ ಕಲ್ಲಬೆಟ್ಟು ನೀರಲ್ಕೆಗೆ ಕೃಷ್ಣರಾಜ್ ಹೆಗ್ಡೆ, 19ನೇ ವಾರ್ಡ್ ಕಲ್ಲಬೆಟ್ಟು ನ್ಯಾಯಬಸದಿಗೆ ಸುಜಾತ ಪೂಜಾರಿ, 20ನೇ ವಾರ್ಡ್‍ನ ಕರಿಂಜೆ ಉರ್ಪೆಲ್‍ಪಾದೆಯ ಚಾರ್ಲ್ ಕ್ರಾಸ್ತಾ, 21ನೇ ಕರಿಂಜೆ ಸುವರ್ಣ ನಗರಕ್ಕೆ ಜಯಶ್ರೀ, 22ನೇ ವಾರ್ಡ್‍ನ ಮಾರೂರಿಗೆ ಕುಶಲ, 23ನೇ ಮಾರೂರು ವಾರ್ಡ್‍ಗೆ ಧನಲಕ್ಷ್ಮಿ ಶೇರಿಗಾರ್.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಎಂ, ಬಿಜೆಪಿ ಪ್ರಮುಖರಾದ ಜಯಾನಂದ ಮುಲ್ಕಿ, ಪಕ್ಷದ ಸಹ ಪ್ರಭಾರಿ ದೇವದಾಸ್ ಶೆಟ್ಟಿ, ಸುಕೇಶ್ ಶೆಟ್ಟಿ ಉಪಸ್ಥಿತರಿದ್ದರು.

ಹಿರಿಯ ಪುರಸಭಾ ಸದಸ್ಯ ಬಾಹುಬಲಿ ಪ್ರಸಾದ್, ಎರಡು ಬಾರಿ ಜಯಗಳಿಸಿದ್ದ ದಿನೇಶ್ ಪೂಜಾರಿ ಮತ್ತು ಲಕ್ಷ್ಮಣ ಪೂಜಾರಿಗೆ ಈ ಬಾರಿ ಟಿಕೇಟ್ ನಿರಾಕರಿಸಲಾಗಿದೆ. ಮೀಸಲಾತಿ ಹಿನ್ನೆಲೆಯಲ್ಲಿ ಸ್ವಕ್ಷೇತ್ರದಲ್ಲಿ ಸ್ಪರ್ಧಿಸಲು ಸಾಧ್ಯವಾಗದ ಕಳಕೊಂಡ ಈ ಸದಸ್ಯರಿಗೆ ಬೇರೆ ಕ್ಷೇತ್ರದಲ್ಲಿ ಸ್ಪರ್ಧಿಸುವುದಕ್ಕೆ ಬೆಂಬಲ ಸಿಕ್ಕಿಲ್ಲ ಎನ್ನಲಾಗಿದೆ. ಕಳೆದ ಕೆಲವು ವರ್ಷಗಳಿಂದ ಬಿಜೆಪಿ ಮಹಿಳಾ ಮೋರ್ಚಾದಲ್ಲಿ ಗುರುತಿಸಿಕೊಂಡಿದ್ದ ಗೀತಾ ಆಚಾರ್ಯ ಅವರು ಕಳೆದ ವರ್ಷದಿಂದಲೇ ಜೈನಪೇಟೆಯಲ್ಲಿ ಚುನಾವಣೆಗೆ ಸ್ಪರ್ಧಿಸುವ ಹುಮ್ಮಸ್ಸಿನಲ್ಲಿದ್ದರು ಆದರೆ ಅವರಿಗೆ ಜೈನ್ ಪೇಟೆಯಲ್ಲಿ ಅವಕಾಶ ನೀಡದೆ ಬೋವಿಕೇರಿಯಲ್ಲಿ ಸ್ಪರ್ಧಿಸಲು ಸೂಚನೆ ನೀಡಿರುವುದರಿಂದ ಸ್ಪರ್ಧೆಯಿಂದ ಹಿಂದಕ್ಕೆ ಸರಿದಿದ್ದಾರೆ. ಏತನ್ಮಧ್ಯೆ ಸ್ಥಳೀಯ ಮಟ್ಟದ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಐದು ವರ್ಷಗಳ ಹಿಂದೆ ಹೇಳಿದ್ದ ಮಾಜಿ ಪುರಸಭಾ ಸದಸ್ಯ ಕೃಷ್ಣರಾಜ ಹೆಗ್ಡೆ ಈ ಬಾರಿ ಕಲ್ಲಬೆಟ್ಟು ನೀರಲ್ಕೆಯ 18ನೇ ವಾರ್ಡ್‍ನಲ್ಲಿ ಸ್ಪರ್ಧಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News