×
Ad

ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ ‘ಟ್ರಾಫಿಕ್ ಪಾಠಶಾಲೆ’ಗೆ ಚಾಲನೆ

Update: 2019-05-14 13:49 IST

ಮಂಗಳೂರು, ಮೇ 14: ಸಂಚಾರ ನಿಯಮ ಪಾಲನೆಯ ನಿಟ್ಟಿನಲ್ಲಿ ಸಾರ್ವಜನಿಕ ವಲಯದಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಎಚ್‌ಡಿಎಫ್‌ಸಿ ಬ್ಯಾಂಕ್ ಹಮ್ಮಿಕೊಂಡ ‘ಟ್ರಾಫಿಕ್ ಪಾಠಶಾಲೆ’ಗೆ ಸಂಚಾರ ಪೂರ್ವ ಠಾಣೆಯ ಇನ್‌ಸ್ಪೆಕ್ಟರ್ ಟಿ. ಅಶೋಕ್ ಕುಮಾರ್ ಮಂಗಳವಾರ ಬ್ಯಾಂಕ್‌ನ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ಸಂಚಾರ ನಿಯಮವನ್ನು ವಿದ್ಯಾವಂತರೇ ಉಲ್ಲಂಘಿಸುತ್ತಿದ್ದಾರೆ. ಇದು ವಿಷಾದನೀಯ. ಪ್ರತಿಯೊಬ್ಬ ನಾಗರಿಕನೂ ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಹೋಂದಿರಬೇಕು. ಆವಾಗ ಮಾತ್ರ ಅಪಘಾತ, ಸಾವು-ನೋವುಗಳ ಪ್ರಕರಣವನ್ನು ಇಳಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ ‘ಟ್ರಾಫಿಕ್ ಪಾಠಶಾಲೆ’ ಆರಂಭಿಸಿರುವುದು ಶ್ಲಾಘನೀಯ ಎಂದರು.

ಚಾಲನೆಯಲ್ಲಿ ಹೆಲ್ಮೆಟ್ ಧರಿಸುವುದು, ಸೀಟ್ ಬೆಲ್ಟ್‌ಗಳನ್ನು ಧರಿಸುವುದು, ಸಿಗ್ನಲ್‌ಗಳು ಮತ್ತು ಲೇನ್ ಶಿಸ್ತಿಗೆ ಬದ್ಧರಾಗಿರುವಂತೆ ಜಾಗೃತಿ ಮೂಡಿಸಲು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಉದ್ಯೋಗಿಗಳು ಮತ್ತು ಸ್ವಯಂ ಸೇವಕರ ಗುಂಪು ಟ್ರಾಫಿಕ್ ಸಿಗ್ನಲ್ ವೃತ್ತದ ಬಳಿ ಭಿತ್ತಿಪತ್ರ ಪ್ರದರ್ಶಿಸಲಿದೆ ಎಂದು ಬ್ಯಾಂಕ್‌ನ ಸರ್ಕಲ್ ಹೆಡ್ ರಜ್‌ನೀಶ್ ಬರುವಾ ಹೇಳಿದರು.

ಈ ಸಂದರ್ಭ ಚಿದಾನಂದ ಶೆಟ್ಟಿ, ಆರ್ಜೆ ಅಜಯ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News