ಮೇ 15: ಮಳೆಗಾಗಿ ಮಂಗಳೂರಿನಲ್ಲಿ ವಿಶೇಷ ನಮಾಝ್, ಪ್ರಾರ್ಥನೆ
Update: 2019-05-14 17:41 IST
ಮಂಗಳೂರು: ಎಸ್.ಕೆ.ಎಸ್.ಎಮ್ ಮಂಗಳೂರು ಇದರ ವತಿಯಿಂದ ಮೇ 15ರಂದು ಬೆಳಗ್ಗೆ 7ಕ್ಕೆ ನೆಹರೂ ಮೈದಾನದಲ್ಲಿ ಮಳೆಗಾಗಿ ವಿಶೇಷ ನಮಾಝ್ ಮತ್ತು ಪ್ರಾರ್ಥನೆ ಹಮ್ಮಿಕೊಳ್ಳಲಾಗಿದೆ.
ಶೇಖ್ ಸಾಕಿಬ್ ಸಲೀಂ ಉಮ್ರಿ ಅವರು ವಿಶೇಷ ನಮಾಝ್ ಮತ್ತು ಖುತುಬಾ ನೇತೃತ್ವ ವಹಿಸಲಿದ್ದಾರೆ. ಮಹಿಳೆಯರಿಗೆ ಪ್ರತ್ಯೇಕ ಸ್ಥಳಾವಕಾಶವಿದ್ದು, ವುಝೂ ಮಾಡಿ ಮೈದಾನಕ್ಕೆ ಆಗಮಿಸಬೇಕಾಗಿ ಪ್ರಕಟನೆ ತಿಳಿಸಿದೆ.