×
Ad

ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಗೆ ಅರ್ಜಿ ಆಹ್ವಾನ

Update: 2019-05-14 20:32 IST

ಉಡುಪಿ, ಮೇ 14: 2019-20ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಈ ಕೆಳಗೆ ನಮೂದಿಸಿರುವ ಕಾರ್ಯಕ್ರಮ ಗಳಡಿ ಸಹಾಯಧನ ಪಡೆಯಲು ಅರ್ಹ/ಆಸಕ್ತ ರೈತರು/ಫಲಾನುಭವಿಗಳಿಂದ ಅರ್ಜಿ ಗಳನ್ನು ಅಹ್ವಾನಿಸಲಾಗಿದೆ.

ಬಾಳೆ ಪ್ರದೇಶದ ವಿಸ್ತರಣೆ (ಕಂದು ಮತ್ತು ಅಂಗಾಂಶ ಕೃಷಿ), ಅನಾನಸ್ಸು ಪ್ರದೇಶ ವಿಸ್ತರಣೆ, ಹೈಬ್ರಿಡ್ ತರಕಾರಿಗಳ ಪ್ರದೇಶ ವಿಸ್ತರಣೆ, ಕಾಳುಮೆಣಸು ಪ್ರದೇಶ ವಿಸ್ತರಣೆ, ಕೋಕೊ ಪ್ರದೇಶ ವಿಸ್ತರಣೆ, ಅಣಬೆ ಉತ್ಪಾದನಾ ಘಟಕ, ಗೇರು ಪುನಃಶ್ಚೇತನ, ಕಾಳುಮೆಣಸು ಪುನಃಶ್ಚೇತನ, ಕೃಷಿ ಹೊಂಡ (20+20+3 ಘ.ಮೀ.), ಹಸಿರು ಮನೆ (ಬೆಳೆಯೊಂದಿಗೆ) ನೆರಳು ಪರದೆ (ಬೆಳೆಯೊಂದಿಗೆ), ಸಮಗ್ರ ಪೀಡೆ/ಪೋಶಕಾಂಶ ನಿರ್ವಹಣೆ, ಜೇನು ಸಾಕಣೆ ಹಾಗೂ ಜೇನು ಸಂಗ್ರಹಣಾ ಉಪಕರಣ, 20 ಅಶ್ವಶಕ್ತಿವರೆಗಿನ ಟ್ರಾಕ್ಟರ್, ತರಬೇತಿ/ಪ್ರವಾಸ, ಪ್ಯಾಕ್ ಹೌಸ್, ಪ್ರಾಥಮಿಕ ತೋಟಗಾರಿಕೆ ಬೆಳೆಗಳ ಸಂಸ್ಕರಣಾ ಘಟಕ, ಸೌರ ಶಾಖ ಘಟಕ, ಹಣ್ಣು ಮಾಗಿಸುವ ಘಟಕ, ಶೀತಲ ಕೊಠಡಿ, ಸಗಟು ಮಾರಾಟ ಮಳಿಗೆಗೆ ಸಹಾಯ ಧನ ನೀಡಲಾಗುವುದು.

ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ತೋಟಗಾರಿಕೆ ಬೆಳೆಗಳಲ್ಲಿ ಹನಿ/ತುಂತುರು ನೀರಾವರಿ ಅಳವಡಿಕೆಗೆ ಸಹಾಯಧನ ನೀಡಲಾಗುತ್ತದೆ. ತೋಟಗಾರಿಕೆ ಬೆಳೆಗಳಿಗೆ ಅನುಮೋದಿತ ಕಂಪನಿ ಅಥವಾ ಡೀಲರ್‌ಗಳಿಂದ ಹೊಸದಾಗಿ ಹನಿ/ತುಂತುರು ನೀರಾವರಿ ಅಳವಡಿಸುವ ರೈತರಿಗೆ ಇಲಾಖೆ ಯಿಂದ ಸಹಾಯಧನ ಲ್ಯವಿದ್ದು, ಪ್ರತಿ ಫಲಾನುವಿಯು ಗರಿಷ್ಟ 5 ಹೆಕ್ಟೆರ್ ವರೆಗೂ ಸಹಾಯಧನ ಪಡೆಯ ಬಹುದು. ಮೊದಲ 2.00 ಹೆಕ್ಟೆರ್‌ಗೆ ಶೇ. 90 ಹಾಗೂ ನಂತರದ ಮೂರು ಹೆಕ್ಟೆರ್‌ಗೆ ಶೇ. 45 ಸಹಾಯಧನ ಲಭ್ಯವಿದೆ.

ಸಮಗ್ರ ತೋಟಗಾರಿಕಾ ಅಭಿವೃದ್ಧಿ ಯೋಜನೆ: 2019-20ನೇ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ದಿ ಯೋಜನೆಯಡಿ ಗೇರು ಪ್ರದೇಶ ವಿಸ್ತರಣೆ, ನೇರಳೆ, ಮ್ಯಾಂಗೋಸ್ಟೀನ್ ಹಾಗೂ ರಾಮ್ ಬೂತಾನ್ ಪ್ರದೇಶ ವಿಸ್ತರಣೆ, ಸಣ್ಣ ಪ್ರಮಾಣದ ಅಣಬೆ ಉತ್ಪಾದನಾ ಘಟಕ ಕಾರ್ಯಕ್ರಮಗಳಡಿ ಸಹಾಯಧನ ಪಡೆಯಲು ಅರ್ಹ/ಆಸಕ್ತ ರೈತರು/ಫಲಾನುಭವಿಳಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದೆ.

ಹೆಚ್ಚಿನ ಮಾಹಿತಿಗೆ ತೋಟಗಾರಿಕೆ ಉಪನಿರ್ದೇಶಕರು (ಜಿ.ಪಂ) ಉಡುಪಿ ದೂರವಾಣಿ ಸಂ.: 0820-2531950, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ) ಉಡುಪಿ ದೂ. ಸಂ 0820-2522837, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, (ಜಿ.ಪಂ) ಕುಂದಾಪುರ ದೂ. ಸಂ. 08254-230813, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, (ಜಿ.ಪಂ), ಕಾರ್ಕಳ ದೂ. ಸಂ. 08258-230288 ರನ್ನು ಸಂಪರ್ಕಿಸುವಂತೆ ಉಡುಪಿ ಜಿಪಂನ ತೋಟಗಾರಿಕೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News