ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ವತಿಯಿಂದ ಇಫ್ತಾರ್ ಕೂಟ
ಮಂಗಳೂರು, ಮೇ 14: ಪ್ರತಿಯೊಬ್ಬ ಮುಸ್ಲಿಮನೂ ಸರಿಯಾಗಿ ಲೆಕ್ಕ ಮಾಡಿ ಝಕಾತ್ ಪಾವತಿಸಲೇಬೇಕು. ನಾವು ನಮಾಝ್, ಉಪವಾಸಗಳಿಗೆ ನೀಡಿದಷ್ಟೇ ಮಹತ್ವ ಝಕಾತ್ ಗೆ ಇದೆ. ಇಸ್ಲಾಮಿ ಕಾನೂನುಗಳ ಪ್ರಕಾರ ಸರಿಯಾಗಿ ಝಕಾತ್ ಪಾವತಿಸದಿದ್ದರೆ ಆತನ ಅರ್ಧ ಸೊತ್ತನ್ನು ವಶಕ್ಕೆ ಪಡೆಯಬಹುದು ಎಂದು ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ ಹೇಳಿದರು.
ಅವರು ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ವತಿಯಿಂದ ನಗರದ ಐಎಂಎ ಹಾಲ್‌ನಲ್ಲಿ ಶನಿವಾರ ಏರ್ಪಡಿಸಲಾದ ಇಫ್ತಾರ್ ಕೂಟದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಮಾತನಾಡುತ್ತಿದ್ದರು.
ಕಾರ್ಯಕ್ರಮದಲ್ಲಿ ಪಿ.ಸಿ. ಹಾಶಿರ್, ಬಿ.ಎಂ. ಬಶೀರ್, ಇಮ್ತಿಯಾಝ್ ಖತೀಬ್, ಬಿ.ಎಸ್. ಬಶೀರ್, ನೂರ್ ಮುಹಮ್ಮದ್, ನಿವೃತ್ತ ಡಿ.ಎಸ್.ಪಿ ಶರೀಫ್, ಫತೇಹ್ ಪುತ್ತಿಗೆ, ಝುಬೈರ್ ಅಂಬರ್, ರಿಫಾತ್ ಆಹ್ಮದ್, ಜೋಹರ್ ಬಾವ, ಆರಿಫ್ ಬಾವ, ಕೆ.ಅಶ್ರಫ್, ನಿಸಾರ್ ಫಕೀರ್ ಮುಹಮ್ಮದ್, ಮುಹಮ್ಮದ್ ಹಾರಿಸ್, ಎ.ಕೆ. ನಿಯಾಝ್, ಅಬ್ದುಲ್ ರಝಾಕ್ ಜಿ., ಆಸಿಫ್ ಸೂಫಿಕಾನ್, ಮುಹಮ್ಮದ್ ಖಾಸಿಂ ಆಹ್ಮದ್, ಅಬೂಬಕ್ಕರ್ ಗ್ರೂಪ್ 4, ಅಶ್ರಫ್ ಸೌದಿ ಟ್ರಾವೆಲ್ಸ್, ರಫೀಕ್ ಮಾಸ್ಟರ್ ಮತ್ತಿತರರು ಉಪಸ್ಥಿತರಿದ್ದರು.
ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿಯ ಅಧ್ಯಕ್ಷ ಎಸ್.ಎಂ. ರಶೀದ್ ಹಾಜಿ ಸ್ವಾಗತಿಸಿದರು. ಚೇಂಬರ್‌ನ ಪ್ರಧಾನ ಕಾರ್ಯದರ್ಶಿ ಇಮ್ತಿಯಾಝ್ ವಂದಿಸಿದರು.