×
Ad

ಡಾ.ಸೌಮ್ಯಾ ಪ್ರವೀಣ್‌ಗೆ ಪಿ.ಎಚ್.ಡಿ

Update: 2019-05-14 21:09 IST

ಮಂಗಳೂರು, ಮೇ 14: ಡಾ.ಸೌಮ್ಯಾ ಪ್ರವೀಣ್ ಕೆ. ಮಂಡಿಸಿದ ‘ಪರ್‌ಸೆಪ್ಶನ್ ಆಫ್ ಎಂಪ್ಲಾಯಿ ಆ್ಯಂಡ್ ಕಸ್ಟಮರ್ಸ್‌ ಟವರ್ಡ್ಸ್ ಇ-ಬ್ಯಾಂಕಿಂಗ್ ಸರ್ವಿಸಸ್ ವಿತ್ ರೆಫರೆನ್ಸ್ ಟು ಸೆಲೆಕ್ಟ್ ಬ್ಯಾಂಕ್ಸ್ ಆಫ್ ದಕ್ಷಿಣ ಕನ್ನಡ ಡಿಸ್ಟ್ರಕ್ಟ್ ಆಫ್ ಕರ್ನಾಟಕ’ ಎಂಬ ಮಹಾಪ್ರಬಂಧಕ್ಕೆ ಭಾರತೀಯಾರ್ ವಿಶ್ವವಿದ್ಯಾಲಯವು ಪಿ.ಎಚ್.ಡಿ ನೀಡಿ ಗೌರವಿಸಿದೆ.

ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ವಾಣಿಜ್ಯ ವಿಭಾಗದ ಸಹಪ್ರಾಧ್ಯಾಪಕ ಡಾ.ಯತೀಶ್ ಕುಮಾರ್ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ್ದರು.

ಇವರು ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ಉಪನ್ಯಾಸಕರಾಗಿದ್ದು, ಕುಂಬ್ಳೆಯ ಹೆಸರಾಂತ ಎ.ಕೆ. ಟೆಕ್ಸ್‌ಟೈಲ್ ಮಾಲಕರು ಹಾಗೂ ಕೃಷ್ಣ ಸೇವಾ ಸಮಿತಿಯ ಅಧ್ಯಕ್ಷ ಎ.ಕೃಷ್ಣ ಹಾಗೂ ಲಕ್ಷ್ಮೀ ದಂಪತಿಯ ಪುತ್ರಿ ಹಾಗೂ ಮಂಗಳೂರಿನ ಶಕ್ತಿನಗರದ ಪ್ರವೀಣ್ ನಟ್ಟಿ ಇವರ ಪತ್ನಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News