×
Ad

ಕಾರಾಜೆ ನೂರುಲ್ ಹುದಾ ಜುಮಾ ಮಸ್ಜಿದ್: ನೂತನ ಅಧ್ಯಕ್ಷರಾಗಿ ಶೇಖಬ್ಬ ಹಾಜಿ ಪುನರಾಯ್ಕೆ

Update: 2019-05-14 22:34 IST
ಶೇಖಬ್ಬ ಹಾಜಿ, ಅಬ್ದುಲ್ ರಹ್ಮಾನ್ 

ಬಂಟ್ವಾಳ, ಮೇ 14: ಕಾರಾಜೆ ನೂರುಲ್ ಹುದಾ ಜುಮಾ ಮಸ್ಜಿದ್ ಇದರ ಆಡಳಿತ ಸಮಿತಿಯ ನೂತನ ಅಧ್ಯಕ್ಷರಾಗಿ ಶೇಖಬ್ಬ ಹಾಜಿ ಅವರು ಪುನರಾಯ್ಕೆಯಾಗಿದ್ದಾರೆ.

ಇತ್ತೀಚೆಗೆ ಸಮಿತಿಯ ಗೌರವಾಧ್ಯಕ್ಷ ಅಬ್ದುರ್ರಹ್ಮಾನ್ ಮದನಿ ಜೆಪ್ಪು ಅವರ ಅಧ್ಯಕ್ಷತೆಯಲ್ಲಿ ನೂರುಲ್ ಹುದಾ ಮದ್ರಸ ಹಾಲ್‍ನಲ್ಲಿ ಈ ಆಯ್ಕೆ ನಡೆಯಿತು.

ಗೌರವಾಧ್ಯಕ್ಷರಾಗಿ ಅಬ್ದುಲ್ ರಹ್ಮಾನ್ ಮದನಿ, ಉಪಾಧ್ಯಕ್ಷರಾಗಿ ಅಬ್ಬುಲ್ ಲತೀಫ್ ಹಾಜಿ ಮತ್ತು ಇಬ್ರಾಹಿಂ ಕಾರಾಜೆ, ಪ್ರಧಾನ ಕಾರ್ಯದರ್ಶಿ ಯಾಗಿ ಮುಹಮ್ಮದ್ ಹನೀಫ್, ಕಾರ್ಯದರ್ಶಿಗಳಾಗಿ ಅಬ್ದುಲ್ ಮುಬಾರಕ್ ಕಾರಾಜೆ ಮತ್ತು ಮುಹಮ್ಮದ್ ಕಾರಾಜೆ, ಕೋಶಾಧಿಕಾರಿಯಾಗಿ ಅಬ್ದುಲ್ ಖಾದರ್, ಲೆಕ್ಕ ಪರಿಶೋಧಕರಾಗಿ ರಹಿಮಾನ್ ಕಾರಾಜೆ ಹಾಗೂ ಮುಹಮ್ಮದ್ ಶರೀಫ್, ಅನ್ಸಾರ್, ಮುಹಮ್ಮದ್ ಮೈಡಿಯರ್, ಫಾರೂಕ್, ಅಬೂಬಕರ್ ಚೆಡವು, ಅಶ್ರಫ್, ಕೆ.ಎಚ್. ಇಬ್ರಾಹಿಂ, ಮೋನಾಕ, ಅಬುಕ, ಸತ್ತಾರ್, ನಿಸಾರ್, ನಝಿರ್, ಅಬ್ಬಾಸ್ ಅವರನ್ನು ಸಮಿತಿ ಸದಸ್ಯರಾಗಿ ಆಯ್ಕೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News